ಬೆಳ್ಯಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ನಿಗೂಢ ವ್ಯಕ್ತಿ ತೋರಿಸಿದ ನೇತ್ರಾವತಿ ನದಿ ತೀರದ 13ನೇ ಪಾಯಿಂಟ್‌ನಲ್ಲಿ ಡ್ರೋನ್, ಡ್ರೋನ್ ಮೌಂಟೆಡ್ ಜಿಪಿಆರ್ ತಂತ್ರಜ್ಞಾನ ಬಳಸಿ ಕಳೇಬರ ಶೋಧ ಕಾರ್ಯಾಚರಣೆ ಆರಂಭಗೊಂಡಿದೆ. ಈ ಬಾರಿ ವಿಶೇಷ ತನಿಖಾ ತಂಡ(SIT)ದ ಅಧಿಕಾರಿಗಳು ಶೋಧ ವ್ಯಾಪ್ತಿಯನ್ನು ಮೂರು ಪಟ್ಟು ಹೆಚ್ಚಳ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದ್ದು, ತನಿಖೆಯಲ್ಲಿ ಏನೋ ಹೊಸ ಸುಳಿವು ಸಿಕ್ಕಿರುವ ಸಾಧ್ಯತೆ ಇದೆ ಎಂಬ ಊಹಾಪೋಹಗಳು ಹಬ್ಬಿವೆ.
ನಿಗೂಢ ವ್ಯಕ್ತಿ ತೋರಿಸಿದ್ದ ಜಾಗವನ್ನು ಅಗೆಯುತ್ತಿದ್ದ ಎಸ್‌ಐಟಿ ಪಾಯಿಂಟ್ ನಂಬರ್ 13 ಅನ್ನು ಹಾಗೆಯೇ ಬಿಟ್ಟಿತ್ತು. ಯಾಕೆಂದರೆ ಇದು ಸೂಕ್ಷ್ಮ ಪ್ರದೇಶವಾಗಿರುವುದರಿಂದ ರೆಡಾರ್ ತಂತ್ರಜ್ಞಾನ ಬಳಸಲು ನಿರ್ಧರಿಸಲಾಗಿತ್ತು. ಇಂದು ಇದೀಗ ಡ್ರೋನ್ ಮೌಂಟೆಡ್ ಜಿಪಿಆರ್ ಯಂತ್ರ ಬಳಸಿ ಶೋಧ ಆರಂಭಿಸಲಾಗಿದೆ. ನಿಗೂಢ ವ್ಯಕ್ತಿ ಗುರುತಿಸಿದ್ದ ಪ್ರದೇಶದ ವ್ಯಾಪ್ತಿಯನ್ನು 3 ಪಟ್ಟು ಹೆಚ್ಚಿಸಿದೆ. ಈಗಾಗಲೇ ಅಲ್ಲಿ ಬೆಳೆದಿದ್ದ ಎತ್ತರದ ಕಳೆ ಗಿಡಗಳು, ಗಿಡ ಗಂಟಿಗಳನ್ನು ಕಾರ್ಮಿಕರಿದ ಕತ್ತರಿಸಲಾಗಿದೆ. ಇದೀಗ ಡ್ರೋನ್ ಮೌಂಟೆಡ್ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (Drone GPR) ತಂತ್ರಜ್ಞಾನವನ್ನು ಬಳಸಿ ಶೋಧ ನಡೆಸಲಾಗುತ್ತಿದೆ.
ಡ್ರೋನ್ ಮೌಂಟೆಡ್ GPR ಟೆನಾವನ್ನು ಡ್ರೋನ್‌ನ ಕೆಳಭಾಗದಲ್ಲಿ ಅಳವಡಿಸಿ, ಗುರುತು ಮಾಡಿದ ಜಾಗದಲ್ಲಿ ಹಾರಿಸಲಾಗುತ್ತದೆ. ಅದು ಹಾರಾಡುವಾಗ ಏನಾದರೂ ಕಳೇಬರವಿದ್ದರೆ ಸಿಗ್ನಲ್‌ಗಳನ್ನು ಕಳಿಸಿ ಸೆನ್ಸರ್‌ಗಳ ಮೂಲಕ ದಾಖಲಿಸುತ್ತದೆ. ಈ ಡೇಟಾವನ್ನು ಸಾಫ್ಟ್‌ವೇರ್ ಮೂಲಕ 2D ಮತ್ತು 3D ಚಿತ್ರಗಳಾಗಿ ಪರಿವರ್ತಿಸಿ, ನೆಲದೊಳಗಿರುವ ವಸ್ತುಗಳ ಮಾಹಿತಿ ಪಡೆಯಲಾಗುತ್ತದೆ. ಒಂದು ವೇಳೆ ಇಲ್ಲಿ ಕಳೇಬರವಿದ್ದರೆ ಸುಲಭವಾಗಿ ಗುಂಡಿ ತೋಡಿ ಹುಡುಕಲು ಸಯಾವಾಗುತ್ತದೆ.
ಸದ್ಯ ಪಾಯಿಂಟ್ ನಂ 13 ರ ಸುತ್ತಮುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇದರಲ್ಲಿ, ಕೆಎಸ್‌ಆರ್‌ಪಿ ತುಕಡಿ ಸಹಿತ ಶಸ್ತ್ರ ಸಜ್ಜಿತ ಪೊಲೀಸರು ಭದ್ರತೆಯನ್ನು ಒದಸುತ್ತಿದ್ದಾರೆ.