ತ್ರಿಪುರಾ: ಖೊವೈ ಜಿಲ್ಲೆಯ ಬೆಹಲಬಾರಿ ಗ್ರಾಮದಲ್ಲಿ ಗಂಡು ಮಗು ಹುಟ್ಟಲಿಲ್ಲ ಅಂತ ಒಂದು ವರ್ಷದ ಹೆಣ್ಣು ಮಗುವಿಗೆ ತಂದೆಯೇ ಬಿಸ್ಕತ್ನಲ್ಲಿ ವಿಷ ಇಟ್ಟು ತಿನಿಸಿ ಜೀವ ತೆಗೆದ ಘಟನೆ ನಡೆದಿದೆ.
ಬೆಹಲಬಾರಿ ಗ್ರಾಮದ ನಿವಾಸಿ ರಥೀಂದ್ರ ದೆಬ್ಬಾರ್ಮ್ ಆರೋಪಿ. ಸುಹಾನಿ ತಂದೆಯಿಂದಲೇ ಜೀವ ಕಳೆದುಕೊಂಡ ಮಗು.
ಇವರು ತ್ರಿಪುರಾ ಸ್ಟೇಟ್ ರೈಫಲ್ಸ್ (ಟಿಎಸ್ಆರ್)ನ ಬೆಟಲಿಯಾನ್ 10ರಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಗಳ ಜೀವ ತೆಗೆದ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಕೋರ್ಟ್ ವಿಚಾರಣೆ ನಡೆಸಿ ಆರೋಪಿಯನ್ನು 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ಹೇಳಲಾಗಿದೆ.
ರಥೀಂದ್ರ ದೆಬ್ಬಾರ್ಮ್ ಹಾಗೂ ಮಿತಾಲಿ ದೆಬ್ಬಾರ್ಮ್ ದಂಪತಿಗೆ ಎರಡು ಹೆಣ್ಣು ಮಕ್ಕಳಿವೆ. 2ನೇ ಮಗು ಕೂಡ ಹೆಣ್ಣು ಮಗು ಹುಟ್ಟಿದ್ದಕ್ಕೆ ಹೆಂಡತಿಯನ್ನು ನಿತ್ಯ ನಿಂದಿಸುತ್ತಾ ಕೂದಲು ಹಿಡಿದು ಎಳೆದಾಡಿ ಹಿಂಸಿಸುತ್ತಿದ್ದರು. ಹೆಂಡತಿ ನನ್ನ ಗಂಡನಿಂದಲೇ ಮಗು ಇಲ್ಲವಾಗಿದೆ ಎಂದು ದುಃಖಿಸಿ ಮಗುನ ಮುಗಿಸಿದ್ದಕ್ಕೆ ಗಂಡನಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆಯಾಗಬೇಕು ಎಂದು ಮಿತಾಲಿ ಆಗ್ರಹವಾಗಿದೆ. ಆರೋಪದ ಹಿನ್ನಲೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಆರೋಪಿಯನ್ನ ವಿಚಾರಣೆ ನಡೆಸುತ್ತಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19