ಧರ್ಮಸ್ಥಳದ ಸ್ಪಾಟ್ ನಂಬರ್ 13 ರಲ್ಲಿ GPR ತಂತ್ರಜ್ಞಾನದಿಂದ ಸ್ಥಳ ಪರಿಶೋಧನೆ !

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಾಟ್ ನಂಬರ್ 13 ರಲ್ಲಿ GPR ತಂತ್ರಜ್ಞಾನದಿಂದ ಸ್ಥಳ ಪರಿಶೋಧನೆ ಇಂದು ನಡೆಯಲಿದೆ.

ಸ್ಪಾಟ್ ನಂಬರ್ 13 ರಲ್ಲಿ ಬೃಹತ್ ಡ್ರೋನ್ ಬಳಸಿ ರಡಾರ್ ಮೂಲಕ ಸ್ಪಾಟ್ ನಂಬರ್ 13 ರಲ್ಲಿ SIT ತಂಡ ಸ್ಕ್ಯಾನ್ ಮಾಡಲಿದ್ದು ಭೂಮಿಯೊಳಗಡೆ ಇರುವ ವಸ್ತುಗಳನ್ನು ರಡಾರ್ ಲೈವ್ ಇಮೇಜ್ ಪತ್ತೆಹಚ್ಚಲಿವೆ ಎಂದು ಮಾಹಿತಿ ದೊರೆತಿದೆ.

SIT ತಂಡ ಮುಖ್ಯಸ್ಥ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ಸ್ಥಳ ಪರಿಶೋಧನೆ ನಡೆಯಲಿದ್ದು ಇಂದು ಪ್ರಣವ್ ಮೊಹಾಂತಿಯವರು ಮಂಗಳೂರಿಗೆ ಬಂದು ನೇರವಾಗಿ ಬೆಳ್ತಂಗಡಿ SIT ಕಚೇರಿಗೆ ತೆರಳಿದ್ದಾರೆಂದು ತಿಳಿದುಬಂದಿದೆ.

ನಂತರ SIT ಅಧಿಕಾರಿಗಳು , AC , ಸೇರಿದಂತೆ ದೂರುದಾರ ಹಾಗೂ ಆತನ ವಕೀಲರೊಂದಿಗೆ ಸ್ಪಾಟ್ ನಂಬರ್ 13 ಕ್ಕೆ ಪ್ರಣವ್ ಮೊಹಾಂತಿಯವರು ಬರಲಿದ್ದು ದೂರುದಾರ ಹಾಗು ಆತನ ವಕೀಲರ ಎದುರಲ್ಲೇ GPR ಮೂಲಕ ಸ್ಥಳ ಪರಿಶೋಧನೆ ನಡೆಯಲಿದೆ. GPR ಮೂಲಕ ಸ್ಪಾಟ್ ನಂಬರ್ 13ರ ರಹಸ್ಯ ಬಯಲಾಗಲಿದೆ ಎಂದು ಮೂಲಗಳು ಮಾಹಿತಿ ತಿಳಿಸಿದೆ.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19

error: Content is protected !!