ಖ್ಯಾತ ಸಂಗೀತ ಸಂಯೋಜಕನ ತಾಯಿ ರಸ್ತೆ ಅಪಘಾತದಲ್ಲಿ ಮೃತ್ಯು !

ಮುಂಬಯಿ: ಖ್ಯಾತ ಸಂಗೀತ ಸಂಯೋಜಕ ಡೋನಿ ಹಜಾರಿಕಾ ಅವರ ತಾಯಿ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಅಸ್ಸಾಮಿ ಸಂಗೀತ, ಹಿಂದಿ ದೂರದರ್ಶನ ಮತ್ತು ಬಾಲಿವುಡ್ ಯೋಜನೆಗಳಿಗೆ ಮ್ಯೂಸಿಕ್‌ ನೀಡಿ ಹೆಸರುವಾಸಿಯಾಗಿರುವ ಡೋನಿ ಹಜಾರಿಕಾ ಮುಂಬೈನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ.

ಭಾನುವಾರ (ಆ.10) ಉಬರ್ ವಾಹನದಲ್ಲಿ ಡೋನಿ ಅವರ ತಾಯಿ ಸುಲ್ತಾನ ಕಿಶೋರ್ ಅಹ್ಮದ್ ಹಜಾರಿಕಾ (77) ಕೇರ್‌ ಟೇಕರ್‌ನೊಂದಿಗೆ ಗೋರೆಗಾಂವ್ ಸ್ಟುಡಿಯೋದಿಂದ ಥಾಣೆಗೆ ತೆರಳುತ್ತಿದ್ದ ವೇಳೆ ಯಾವುದೇ ಸಿಗ್ನಲ್‌ ಇಲ್ಲದೆ ನಿಂತಿದ್ದ ಕ್ರೇನ್‌ಗೆ ಹಿಂದಿನಿಂದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದವರಿಗೆ ಗಾಯಾಗಿದೆ. ಸುಲ್ತಾನ ಅವರಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾದ ಹಿನ್ನೆಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಆದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಖ್ರೋಲಿ ಪೊಲೀಸರು ಉಬರ್ ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 106(1), 125(ಎ), 125(ಬಿ), ಮತ್ತು 281 ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 184 ರ ಅಡಿಯಲ್ಲಿ ನಿರ್ಲಕ್ಷ್ಯದ ಚಾಲನೆಗಾಗಿ ಪ್ರಕರಣ ದಾಖಲಿಸಿದ್ದಾರೆ. ಕ್ರೇನ್ ಆಪರೇಟರ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19

error: Content is protected !!