ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(SIT)ದ ತನಿಖೆ ಮತ್ತಷ್ಟು ತೀವ್ರಗೊಂಡಿದ್ದು, ಇದೀಗ ನಿಗೂಢ ವ್ಯಕ್ತಿ ಜೊತೆ ಕೆಲಸ ಮಾಡಿದ ಐವರನ್ನು ಪತ್ತೆಹಚ್ಚಿದ್ದಾರೆ.
ನಿಗೂಢ ವ್ಯಕ್ತಿಯೊಂದಿಗೆ ಕೆಲಸ ಮಾಡಿದ ಐವರು ತಮಿಳುನಾಡು ಮೂಲದವರಾಗಿದ್ದು, ಇವರು ಸಫಾಯಿ ಕರ್ಮಚಾರಿಗಳಾಗಿದ್ದರು. ಇದೀಗ ಎಸ್‌ಐಟಿ ಅವರನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ.
ತಮಿಳುನಾಡು ಮಾತ್ರವಲ್ಲದೆ ಇತರ ಪ್ರದೇಶಗಳಿಂದಲೂ ಕೆಲವರನ್ನು ವಿಚಾರಣೆಗಾಗಿ ಹಾಜರುಪಡಿಸಲಾಗಿದೆ.
1995ರಿಂದ 2014ರವರೆಗೆ ಅನಾಮಿಕ ದೂರುದಾರನೊಂದಿಗೆ ಕೆಲಸ ಮಾಡಿದವರನ್ನು ಎಸ್‌ಐಟಿ ಹುಡುಕಾಟ ನಡೆಸಿದ್ದು, ಕೆಲವರನ್ನು ವಿಚಾರಣೆ ನಡೆಸಿದೆ. ಇನ್ನು ಕೆಲವರ ಹುಡುಕಾಟ ಬಾಕಿ ಇರುವುದಾಗಿ ತಿಳಿದುಬಂದಿದೆ. . ಅಷ್ಟು ಮಾತ್ರವಲ್ಲದೆ , ಧರ್ಮಸ್ಥಳ ಗ್ರಾಮ ಪಂಚಾಯತ್‌ನಿಂದ ಪಡೆದ ಹಳೆಯ ದಾಖಲೆಗಳನ್ನು ಆಧಾರವಾಗಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಾ ಸಾಗುತ್ತಿದೆ. ಈ ಮಧ್ಯೆ ಎರಡನೇ ಹಂತದ ಹುಡುಕಾಟ ಆರಂಭವಾಗಿದೆ. ಪಾಯಿಂಟ್ ನಂಬರ್ 13ನ್ನು ಹೊರತುಪಡಿಸಿ, ನಿಗೂಢ ವ್ಯಕ್ತಿ ಹೇಳಿದ ಬೇರೆ ಸ್ಪಾಟ್‌ಗಳ ಶೋಧಕ್ಕೆ ಮುಂದಾಗಿದ್ದಾರೆ. ಸ್ಪಾಟ್ ನಂಬರ್ 13ರಲ್ಲಿ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (GPR) ತಂತ್ರಜ್ಞಾನ ಬಳಕೆ ಮಾಡಲು ಎಸ್‌ಐಟಿ ಮುಂದಾಗಿದೆ.