ಸುರತ್ಕಲ್: ಕರ್ನಾಟಕ ಜಾನಪದ ಎಂಬುದು ಅದ್ಬುತವಾದ ಕಣಜವಾಗಿದೆ, ಜನಪದ ಎಂಬುದು ಒಂದು ನಮ್ಮ ದೊಡ್ಡ ಪರಂಪರೆ, ವಿಜ್ಜಾನ ಎಷ್ಟೇ ಮುಂದುವರಿದರೂ ಜನಪದ ನಾಶವಾಗುವುದಿಲ್ಲ, ಜನಪದ ಎಂಬುದು ಬಾಯಿಯಿಂದ ಬಾಯಿಗೆ ಬಂದಿರುವಂತಹದು ಅಲಿಖಿತ ಸಂವಿಧಾನವಾಗಿದೆ, ಜಾನಪದದ ಉಳಿವಿಗೋಸ್ಕರ ನಾವು ಸಾಕಷ್ಟು ಕೆಲಸ ಮಾಡುತಿದ್ದೇವೆ, ಹಳೆಯ ಸಂಸ್ಕೃತಿಯನ್ನು ಯುವಜನಾಂಗಕ್ಕೆ ತಿಳಿಸಿ ಉಳಿಸುವ ಕೆಲಸ ನಮ್ಮ ಸಂಘಟನೆಯಿಂದ ಮಾಡುತ್ತಿದ್ದೇವೆ ಎಂದು ಕನ್ನಡ ಜಾನಪದ ಪರಿಷತ್, ಬೆಂಗಳೂರು ರಾಜ್ಯಾಧ್ಯಕ್ಷ, ಜಾನಪದ ಯುವ ಬ್ರಿಗೇಡ್ ಹಾಗೂ ಭಾರತ ಸರಕಾರದ ಐಸಿಸಿಆರ್ ಸದಸ್ಯರಾದ ಡಾ. ಜಾನಪದ ಎಸ್. ಬಾಲಾಜಿ ಹೇಳಿದರು.
ಗೋವಿಂದದಾಸ ಪದವಿ ಹಾಗೂ ಪದವಿ ಪೂರ್ವ ಕಾಲೇಜು ಸುರತ್ಕಲ್ ನ ಎ.ವಿ. ಸಭಾಂಗಣದಲ್ಲಿ ಜಾನಪದ ಯುವ ಬ್ರಿಗೇಡ್ ಗಳ ಸಹಯೋಗದೊಂದಿಗೆ ಪದಗ್ರಹನ ಸಮಾರಂಭವನ್ನು ಉದ್ಘಾಟಿಸಿದರು.
ಹಿಂದು ವಿದ್ಯಾದಾಯಿನೀ ಸಂಘ ಅಧ್ಯಕ್ಷ ಎಚ್. ಜಯಚಂದ್ರ ಹತ್ವಾರ್ ಮಾತನಾಡಿ, ನಮ್ಮ ಗಾದೆ ಮಾತು, ಹಾಡು, ಇವುಗಳನ್ನು ಅಭಿರುಚಿಯಾಗಿ ಬೆಳೆಸಲು ಮುಂದಾಗಬೇಕು, ಯುವ ಬ್ರಿಗೇಡ್ ಮಾಡುವ ಎಲ್ಲಾ ಉತ್ತಮ ಕೆಲಸಗಳಿಗೆ ನಮ್ಮ ಬೆಂಬಲವಿದೆ ಎಂದರು.
ಗೋವಿಂದದಾಸ ಪದವಿ ಕಾಲೇಜಿನ ಪ್ರಾಂಶುಪಾಲರಾದ ಹರೀಶ್ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು, , ನಿರ್ದೇಶಕರಾದ ರಮೇಶ್ ಭಟ್, ಗೋವಿಂದದಾಸ್ ಪದವೀ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ ಪಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದ.ಕ ಜಿಲ್ಲಾ ಸಂಚಾಲಕ ಸಂಪತ್ ಎಸ್ ಬಿ ಹೊಸಬೆಟ್ಟು, ಜಿಲ್ಲೆ ಸಹ ಸಂಚಾಲಕರು ಸೌರವ್ ಶ್ರೀಯಾನ್ ಸುರತ್ಕಲ್, ಮಂಗಳೂರು ತಾಲೂಕು ಸಂಚಾಲಕರಾದ ಕಾರ್ತಿಕ್ ರಾವ್ ಇಡ್ಯಾ, ಮೂಡಬಿದ್ರೆ ತಾಲೂಕು ಸಂಚಾಲಕ ಕೌಶಲ್ ರಾವ್ ಪುತ್ತಿಗೆ, ಬಂಟ್ವಾಳ ತಾಲೂಕು ಸಂಚಾಲಕರಾದ ಸತ್ಯಜಿತ್ ಎಸ್ ರಾವ್, ಕಡಬ ತಾಲೂಕು ಸಂಚಾಲಕರಾದ ಶ್ರೇಯ ರೋಹಿತ್ ಉಚ್ಚಿಲ, ಬೆಳ್ತಂಗಡಿ ತಾಲೂಕು ಸಂಚಾಲಕರಾದ ಹರ್ಷಲ್ ಉಜಿರೆ ಪದವಿ ಸ್ವೀಕರಿಸಿದರು.
ದ.ಕ.ಜಿಲ್ಲಾ ಸಂಚಾಲಕ ಸಂಪತ್ ಎಸ್. ಬಿ., ಹೊಸಬೆಟ್ಟು ಸ್ವಾಗತಿಸಿ, ಮಂಗಳೂರು ತಾಲೂಕು ಸಂಚಾಲಕ ಕಾರ್ತಿಕ್ ರಾವ್ ವಂದಿಸಿದರು. ರೋಹಿತ್ ಉಚ್ಚಿಲ ನಿರೂಪಿಸಿದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19