ಧರ್ಮಸ್ಥಳ ಪಂಚಾಯತ್‌ನಿಂದ ದಾಖಲೆಗಳನ್ನು ಪಡೆದುಕೊಂಡ ಎಸ್‌ಐಟಿ

ಧರ್ಮಸ್ಥಳ: ಧರ್ಮಸ್ಥಳ ಕಾಡಿನಲ್ಲಿ ನಿಗೂಢ ವ್ಯಕ್ತಿಯೋರ್ವ ಹೆಣ ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ಅಧಿಕಾರಿಗಳು ಧರ್ಮಸ್ಥಳ ಗ್ರಾಮ ಪಂಚಾಯತ್‌ನಿಂದ ಶವ ಸಂಸ್ಕಾರ ಸಹಿತ ಹಲವು ದಾಖಲೆಗಳನ್ನು ಪಡೆದುಕೊಂಡಿರುವುದಾಗಿ ಮೂಲಗಳಿಂದ ಮಾಹಿತಿ ಲಭಿಸಿದೆ.

ಇನ್ಸ್‌ಪೆಕ್ಟರ್‌ ಸಂಪತ್ ನೇತೃತ್ವದ ಅಧಿಕಾರಿಗಳು ಇಂದು(ಆಗಸ್ಟ್ 6) ಬೆಳಿಗ್ಗೆ ಗ್ರಾಮ ಪಂಚಾಯತ್‌ಗೆ ಆಗಮಿಸಿ ದಾಖಲೆ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿಸಿದಂತೆ ಧರ್ಮಸ್ಥಳ ಗ್ರಾಮ ಪಂಚಾಯತ್ ಗೆ ಬಂದ SIT ಯ ಒಂದು ತಂಡ ಹಲವಾರು ದಾಖಲೆಗಳನ್ನು ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

1995 ರಿಂದ 2014 ರವರೆಗೆ ಗ್ರಾಮ ಪಂಚಾಯತ್‌ನಲ್ಲಿ ಕರ್ತವ್ಯ ಮಾಡಿದ ಪಿಡಿಓಗಳು, ಇತರ ಅಧಿಕಾರಿಗಳು, ವಿ.ಎ.ಗಳು ಬರೆದಿರುವ ಜನನ ಮರಣ, ಸಹಿತ ಹಲವು ದಾಖಲೆಗಳನ್ನು ತಮ್ಮ ಸಪರ್ದಿಗೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.

ʻಈಗಾಗಲೇ ನಿಗೂಢ ವ್ಯಕ್ತಿ ತೋರಿಸಿದ ಪಾಯಿಂಟ್‌ಗಳ ಅಗೆಯಲಾಗುತ್ತಿದ್ದು, ಕಳೇಬರ ಶೋಧಿಸಲಾಗುತ್ತಿದೆ. ಈಗ ಪತ್ತೆಯಾದ ಕಳೇಬರಕ್ಕೂ, ಪಂಚಾಯತ್‌ನಿಂದ ನಡೆದ ಶವ ಸಂಸ್ಕಾರಕ್ಕೂ ತಾಳೆ ಹಾಕಿ ರಹಸ್ಯ ಪತ್ತೆಹಚ್ಚಲು ಎಸ್‌ಐಟಿ ಪಂಚಾಯತ್‌ನಿಂದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!