ಪೀಣ್ಯ ದಾಸರಹಳ್ಳಿ: ಫಿಟ್‌ನೆಲ್ ಸೆಂಟರ್ ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿ, ಅದೇ ಕಟ್ಟಡದ 3ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕಡಬಗೆರೆಯಲ್ಲಿ ಘಟನೆ ನಡೆದಿದೆ. ರಿಸೆಪ್ಷನಿಸ್ಟ್ ರಕ್ಷಿತಾ (20) ಮೃತ ಯುವತಿ ಎಂದು ಗುರುತಿಸಲಾಗಿದೆ.
ಕಡಬಗೆರೆಯಲ್ಲಿರುವ ಜುನಿಫರ್ ಫಿಟ್‌ನೆಸ್ ಸೆಂಟರ್‌ನಲ್ಲಿ ರಿಸೆ ಪ್ಷನಿಸ್ಟ್ ಆಗಿ ಯುವತಿ ಕೆಲಸ ಮಾಡು ತ್ತಿದ್ದರು. ಕಳೆದ 8 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದರು. ಆದರೆ, ಫಿಟ್‌ನೆಸ್ ಸೆಂಟರ್‌ನ 3ನೇ ಮಹಡಿಗೆ ಹೋಗಿ ಅಲ್ಲಿಂದ ಬಿದ್ದು ಜೀವ ಕಳೆದುಕೊಂಡಿದ್ದಾರೆ. ಈ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇನ್ನು ಯುವತಿ ಜೀವ ಕಳೆದುಕೊಳ್ಳಲು ಏನು ಕಾರಣ ಎಂಬುದು ಸ್ಪಷ್ಟವಾಗಿಲ್ಲ. 3ನೇ ಮಹಡಿಯಿಂದ ಬಿದ್ದಿದ್ದರಿಂದ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.