ಮಂಗಳೂರು: ಪಶುವೈದ್ಯೆ ಆತ್ಮಹತ್ಯೆ, ಕಾರಣ ನಿಗೂಢ

ಪುತ್ತೂರು: ಮೂಲತಃ ಪುತ್ತೂರಿನ ಯುವತಿ, ಮಂಗಳೂರಿನ ಪಶುವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಯುವತಿ ಮಂಗಳೂರಿನ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.


ಪುತ್ತೂರು ಬಪ್ಪಳಿಗೆ ನಿವಾಸಿ ಚಾಟರ್ಡ್ ಅಕೌಂಟೆಂಟ್‌ ಗಣೇಶ್‌ ಜೋಶಿ ಅವರ ಪುತ್ರಿ ಕೀರ್ತನಾ ಜೋಶಿ (27) ಮೃತ ದುರ್ದೈವಿ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೀರ್ತನಾ ಜೋಶಿ ಅವರ ಮೃತದೇಹವನ್ನು ಪುತ್ತೂರಿನ ಮನೆಗೆ ತಂದು, ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಪಶುವೈದ್ಯಕೀಯದಲ್ಲಿ ಎಂ.ಡಿ. ಶಿಕ್ಷಣ ಪೂರೈಸಿರುವ ಡಾ| ಕೀರ್ತನಾ ಜೋಶಿ ಅವರು ಪುತ್ತೂರು, ಕೊಯಿಲ ಹಾಗೂ ಮಂಗಳೂರಿನಲ್ಲಿ ಖಾಸಗಿಯಾಗಿ ಪಶುವೈದ್ಯೆಯಾಗಿ ಕಾರ್ಯನಿರ್ವಹಿಸಿದ್ದರು. ಅವರು ಸೋಮವಾರ ತಡರಾತ್ರಿ ಸ್ವಗೃಹದಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ ಎಂದು ತಿಳಿದುಬಂದಿದೆ. ಮೃತರು ತಂದೆ ಗಣೇಶ್‌ ಜೋಶಿ, ತಾಯಿ ವೀಣಾ ಜೋಶಿ, ಸಹೋದರಿ ಡಾ. ಮೇಘನಾ ಜೋಶಿ ಅವರನ್ನು ಅಗಲಿದ್ದಾರೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!