ಬೆಳ್ತಂಗಡಿ: ಧರ್ಮಸ್ಥಳ ಕಾಡಿನಲ್ಲಿ ನಿಗೂಢ ವ್ಯಕ್ತಿ ಗುರುತಿಸಿದ ಸ್ಥಳದ ಬಂಗ್ಲಗುಡ್ಡೆಯ ನೂರು ಮೀಟರ್ ಸ್ಥಳದಲ್ಲಿ ಸುಮಾರು ನಾಲ್ಕರಿಂದ ಐದು ಕಳೇಬರ ಪತ್ತೆಯಾಗಿರುವ ಕುರಿತು ಗುಮಾನಿ ವ್ಯಕ್ತವಾಗಿದೆ. ಆದರೆ ಇಲ್ಲಿ ಒಂದು ಕಳೇಬರ ಪತ್ತೆಯಾಗಿರುವುದನ್ನು ಎಸ್‌ಐಟಿ ಮೂಲಗಳು ದೃಢಪಡಿಸಿದೆ.
ವಿಶೇಷವೆಂದರೆ ಇಂದಿನ ಕಾರ್ಯಾಚರಣೆಯಲ್ಲಿ ಪಾಯಿಂಟ್ ನಂಬರ್ 11 ಹಾಗೂ 12ರ ಶೋಧ ನಡೆಸಬೇಕಿತ್ತು. ಆದರೆ ಇವೆರಡನ್ನೂ ಮುಟ್ಟದೆ ನಿಗೂಢ ವ್ಯಕ್ತಿ ಸೂಚಿಸಿದ್ದ ಕಾಡು ಪ್ರದೇಶದ ಬಂಗ್ಲಗುಡ್ಡೆ ಪ್ರದೇಶದಲ್ಲಿ ಎಸ್‌ಐಟಿ ಅಧಿಕಾರಿಗಳು ಗುಂಡಿ ತೋಡಿಸಿದಾಗ ಸುಮಾರು ನಾಲ್ಕೈದು ಕಳೇಬರ ಪತ್ತೆಯಾಗಿರಬಹುದು ಎನ್ನಲಾಗುತ್ತಿದ್ದು, ಒಂದು ದೃಢಪಟ್ಟಿದೆ. ಈಗಾಗಲೇ ಸ್ಥಳಕ್ಕೆ ಎರಡು ಗೋಣಿ ಉಪ್ಪನ್ನು ಸಾಗಿಸಲಾಗಿದ್ದು, ಪ್ರದೇಶದಲ್ಲಿ ಸಶಸ್ತ್ರಪಡೆಗಳನ್ನು ಕರೆಸಿಕೊಳ್ಳಲಾಗಿದೆ. ಕಾರ್ಯಾಚರಣೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.