ಲಂಡನ್:ಭಾರತದ ವಿರುದ್ಧ ಜುಲೈ 31 ಗುರುವಾರದಂದು ಪ್ರಾರಂಭವಾಗಲಿರುವ ಸರಣಿ ನಿರ್ಣಾಯಕ 5ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡದಲ್ಲಿ ನಾಲ್ಕು ಆಟಗಾರರ ಬದಲಾವಣೆಗಳನ್ನು ಮಾಡಲಾಗಿದ್ದು, ತಂಡದ ನಾಯಕ ಬೆನ್ ಸ್ಟೋಕ್ಸ್ ಹೊರಗುಳಿಯಲಿದ್ದು, ಸ್ಟೋಕ್ಸ್ ಜತೆಗೆ ಲಿಯಾಮ್ ಡಾಸನ್, ಜೋಫ್ರಾ ಆರ್ಚರ್ ಮತ್ತು ಬ್ರೈಡನ್ ಕಾರ್ಸ್ ಕೂಡ ಹೊರಗುಳಿಯಲಿದ್ದಾರೆ.
ಓವಲ್‌ನಲ್ಲಿ ಸರಣಿಯ ಅಂತಿಮ ಪಂದ್ಯಕ್ಕೆ ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಓಲಿ ಪೋಪ್ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಟೋಕ್ಸ್, ಡಾಸನ್, ಆರ್ಚರ್ ಮತ್ತು ಕಾರ್ಸೆ ಬದಲಿಗೆ ಜಾಕೋಬ್ ಬೆಥೆಲ್, ಬೌಲರ್‌ಗಳಾದ ಜೇಮೀ ಓವರ್ಟನ್, ಗಸ್ ಅಟ್ಕಿನ್ಸನ್ ಮತ್ತು ಜೋಶ್ ಟಂಗ್ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಜಾಕೋಬ್ ಬೆಥೆಲ್ ಅವರು 6 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.
ಸ್ಟೋಕ್ಸ್ ಅವರಿಗೆ ನಾಲ್ಕನೇ ಟೆಸ್ಟ್ ಪಂದ್ಯದ ಕೊನೆಯ ದಿನದಂದು ಭುಜ ಮತ್ತು ಮಂಡಿ ನೋವಿನ ಸಮಸ್ಯೆ ತೀವ್ರವಾಗಿ ಕಾಣಿಸಿಕೊಂಡಿತ್ತು. ಡಾಸನ್ ಅನುಪಸ್ಥಿತಿಯಲ್ಲಿ, ಬೆಥೆಲ್ ಇಂಗ್ಲೆಂಡ್ ನ ಪ್ರಮುಖ ಸ್ಪಿನ್ನರ್ ಆಗಲಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19