ಧರ್ಮಸ್ಥಳ ಗ್ರಾಮದ ಬುರುಡೆ ರಹಸ್ಯ: ಪಾಯಿಂಟ್‌ ನಂಬರ್‌ 2,3 ರಲ್ಲಿಯೂ ಸಿಗದ ಕುರುಹು!

ಮಂಗಳೂರು: ಧರ್ಮಸ್ಥಳ ಗ್ರಾಮದ ತಲೆಬುರುಡೆ ರಹಸ್ಯ ಮತ್ತಷ್ಟುನ ಜಟಿಲವಾಗುತ್ತಿದೆ. ಮಾರ್ಕ್‌ ಮಾಡಿದ 13 ಪಾಯಿಂಟ್‌ಗಳ ಪೈಕಿ ಮೂರು ಪಾಯಿಂಟ್‌ಗಳ ಗುಂಡಿ ಅಗೆದಿದ್ದು, ಇದುವರೆಗೆ ಯಾವುದೇ ಕಳೇಬರ ಪತ್ತೆಯಾಗಿಲ್ಲ.


ನಿನ್ನೆ ಮೊದಲ ಪಾಯಿಂಟನ್ನು ಗುದ್ದಲಿಯಿಂದ ಅಗೆದರೂ ಏನೂ ಸಿಗದಿದ್ದಾಗ ಹಿಟಾಚಿ ಯಂತ್ರದ ಮೂಲಕ ಅಗೆಯಲಾಯಿತು. ಆದರೂ ಯಾವುದೇ ಅಸ್ತಿಪಂಜರ ಸಿಕ್ಕಿರಲಿಲ್ಲ. ಹೀಗಾಗಿ ಅನಾಮಧೇಯ ಮುಸುಕುಧಾರಿ ಸೂಚಿಸಿದ ಪಾಯಿಂಟ್‌ ನಂಬರ್‌ 3 ಹಾಗೂ 4 ಅನ್ನು ಅಗೆಯಲಾಯಿತು. ಆದರೆ ಇದುವರೆಗೆ ಯಾವುದೇ ಅಸ್ತಿಪಂಜರ ಸಿಕ್ಕಿರಲಿಲ್ಲ ಎಂದು ತಿಳಿದುಬಂದಿದೆ.
ಹೀಗಾಗಿ ಪಾಯಿಂಟ್‌ ನಂಬರ್‌ ನಾಲ್ಕರಲ್ಲಿ ಗುಂಡಿ ಅಗೆಯಲು ಎಸ್‌ಐಟಿ ಮುಂದಾಗಿದೆ. ಎಲ್ಲಾ ಪಾಯಿಂಟ್‌ಗಳನ್ನು ಸುಮಾರು ಆರು ಅಡಿಗಳವರೆಗೆ ಗುಂಡಿ ತೋಡಲಾಗಿದೆ. ಕಾರ್ಮಿಕರು ಮಣ್ಣನ್ನು ಶೋಧಿಸಿದರು. ಆದರೆ ಯಾವುದೇ ವಸ್ತು ಸಿಕ್ಕಿರಲಿಲ್ಲ. ಕೆಲವೆಡೆಗಳಲ್ಲಿ ಹಿಟಾಚಿ ಯಂತ್ರಗಳನ್ನು ಬಳಕೆ ಮಾಡಲಾಗಿದೆ.


ಇದೀಗ ಆನಾಮಿಕ ವ್ಯಕ್ತಿ ತಾನು ತೋರಿಸಿರುವ 13ನೇ ಪಾಯಿಂಟ್ ಅನ್ನು ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೋಹಾಂತಿ ಸಮ್ಮುಖದಲ್ಲೇ ಆಗಬೇಕು ಎಂದು ಪಟ್ಟುಹಿಡಿದಿದ್ದಾನೆ ಎನ್ನಲಾಗಿದೆ. ಅವರು ಬರುವವರೆಗೂ ಮೊದಲು 9, 10, 11 ಹಾಗೂ 12ನೇ ಪಾಯಿಂಟ್‌ಗಳಲ್ಲಿ ಹುಡುಕಾಟ ನಡೆಸುವಂತೆ ಮನವಿ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈತ ಈ ರೀತಿ ಯಾಕೆ ಹೇಳಿರಬಹುದೆಂದು ಭಾರೀ ಕುತೂಹಲ ಮೂಡಿಸಿದೆ. ಆದರೆ ಒಂದಾದ ಮೇಲೆ ಇನ್ನೊಂದರಂತೆ ಉತ್ಖನನ ಮಾಡುವ ಬಗ್ಗೆ ಎಸಿ ವರ್ಗೀಸ್ ಸೂಚನೆ ನೀಡಿದ್ದಾರೆ.

ಧರ್ಮಸ್ಥಳಕ್ಕೆ ಎಸ್ ಐಟಿ ಮುಖ್ಯಸ್ಥ ಪ್ರಣವ್‌ ಮೊಹಂತಿ ಭೇಟಿ ನೀಡಿದ್ದು, ಮಂಗಳೂರಿಗೆ ಬಂದು ಬೆಳ್ತಂಗಡಿ ಎಸ್ ಐಟಿ ಕಚೇರಿಯಲ್ಲಿ ಮೀಟಿಂಗ್ ನಡೆಸಿ, ಡಿಐಜಿ ಅನುಚೇತ್ ರಿಂದ ತನಿಖೆ ಹಾಗೂ ಉತ್ಖನನ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

error: Content is protected !!