ಮಂಗಳೂರು : ಭಾರತದಲ್ಲಿ ಪ್ರಥಮ ಬಾರಿಗೆ ಶ್ರೀ ದಾಮೋದರ ಜ್ಯುವೆಲ್ಲರ್ಸ್- ಗುರುಪುರ ಕೈಕಂಬ ಇದರ 25 ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ವಿಶೇಷ ಆಫರ್ ಒಂದನ್ನು ಘೋಷಣೆ ಮಾಡಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ವೇಸ್ಟೇಕ್ 7% ದರದಲ್ಲಿ ಚಿನ್ನವನ್ನು ಪೂರೈಸುವುದಲ್ಲದೆ, ಯಾವುದೇ ಮೇಕಿಂಜ್ ಚಾರ್ಜಸ್ ವಿಧಿಸುವುದಿಲ್ಲ ಎಂದು ಜ್ಯುವೆಲ್ಲರಿ ವ್ಯವಸ್ಥಾಪಕ ವಿವೇಕ್ ಆರ್. ಪ್ರಭು ಆಫರ್ ಘೋಷಣೆ ಮಾಡಿದ್ದಾರೆ.
ಮಂಗಳೂರಿನ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಅವರು, 25 ವರ್ಷಗಳ ಹಿಂದೆ ಈ ಸಂಸ್ಥೆಯನ್ನು ಕಟ್ಟಿಬೆಳೆಸಿದ್ದು ಇದೀಗ ಹೆಮ್ಮರವಾಗಿ ಬೆಳೆದಿದ್ದು ಸಂತೋಷದ ವಿಚಾರ. ಶ್ರೀ ದಾಮೋದರ ಜ್ಯುವೆಲ್ಲರ್ಸ್ ಮಳಿಗೆಯೂ 25 ವರ್ಷಗಳಿಂದ ಸತತ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಸಂಸ್ಥೆ ಗ್ರಾಹಕರಿಂದಲೇ ಅಭಿವೃದ್ಧಿ ಹೊಂದಿದ್ದ ಉದ್ದೇಶದಿಂದಲೇ ಆಗಸ್ಟ್ 1 ರಿಂದ ಡಿಸೆಂಬರ್ 31 ರ ವರೆಗೆ ಗ್ರಾಹಕರಿಗೋಸ್ಕರ ಸಂಸ್ಥೆಯಿಂದ ಈ ಆಫರ್ ಇರಲಿದ್ದು, ಇದು ನಮ್ಮ ಸಂಸ್ಥೆ ಗ್ರಾಹಕರಿಗೆ ನೀಡುವ ಚಿಕ್ಕ ಕೊಡುಗೆಯಾಗಿದೆ ಎಂದರು.
ಶ್ರೀ ದಾಮೋದರ ಜ್ಯುವೆಲ್ಲರ್ಸ್ ನಿಂದ ಎ.ಪಿ.ಎಲ್ ಕಾರ್ಡ್ ದಾರರಲ್ಲದೆ ಮಳಿಗೆಗೆ ಬರುವ ಎಲ್ಲಾ ಗ್ರಾಹಕರಿಗೆ ಆಕರ್ಷಕ ವಿನಾಯಿತಿ ಹಾಗೂ ವಿಶೇಷ ದರದಲ್ಲಿ ಕೊಡುಗೆ ನೀಡುತ್ತಾ ಬಂದಿದ್ದೇವೆ. ಈ ಹಿನ್ನೆಲೆ ಗ್ರಾಹಕರು ಈ ಆಕರ್ಷಕ ಕೊಡುಗೆಯನ್ನು ಸದುಪಯೋಗಗೊಳಿಸುವಂತೆ ವಿವೇಕ್ ಆರ್. ಪ್ರಭು ವಿನಂತಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಶಾಂತೇರಿ ಪ್ರಭು, ಸಿದಾರ್ಥ್ ವಿವೇಕ್ ಉಪಸ್ಥಿತರಿದ್ದರು.
ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ: