ಧರ್ಮಸ್ಥಳ ಕೇಸ್‼️ 14 ಪಾಯಿಂಟ್, 30ಕ್ಕೂ ಹೆಚ್ಚು ಗನ್ ಮ್ಯಾನ್, ರಾತ್ರಿಯಿಡೀ ಕಾಡು ಕಾಯಲಿದ್ದಾರೆ ಶಸ್ತ್ರಸಜ್ಜಿತ ಎಎನ್ ಎಫ್ ಸಿಬ್ಬಂದಿ!

ಬೆಳ್ತಂಗಡಿ: ಇಡೀ ದೇಶದ ಗಮನ ಧರ್ಮಸ್ಥಳ ಗ್ರಾಮದತ್ತ ನೆಟ್ಟಿದೆ. ಅದಕ್ಕೆ ಕಾರಣ ತಾನು ಹಿಂದೆ  ಸ್ವಚ್ಛತಾ ಕಾರ್ಯದಲ್ಲಿದ್ದಾಗ “ಮೇಲಿನವರ” ಅಣತಿಯಂತೆ ನೂರಾರು ಶವಗಳನ್ನು ನೇತ್ರಾವತಿ ನದಿಯ ತಟದ ಸುತ್ತಮುತ್ತ ಹೂತಿದ್ದೇನೆ ಎಂದು ಹೇಳಿರುವ ಸಾಕ್ಷಿ ದೂರುದಾರ. ರಾಜ್ಯ ಸರಕಾರ ರಚಿಸಿರುವ ಎಸ್ ಐಟಿ ತಂಡ ಪ್ರಕರಣದ ತನಿಖೆ ನಡೆಸುತ್ತಿದ್ದು ಇಂದು ಬೆಳಗ್ಗೆ ಮುಸುಕುಧಾರಿಯನ್ನು ಸ್ಥಳಕ್ಕೆ ಕರೆದೊಯ್ದು ತನಿಖೆ ತೀವ್ರಗೊಳಿಸಿದೆ.

ಆತ ಹೇಳಿದಂತೆ ನೇತ್ರಾವತಿ ನದಿ ತೀರದಿಂದ ಎರಡು ಕಿಮೀ ಸುತ್ತಮುತ್ತ ಕಾಡಿನಲ್ಲಿ 14 ಪಾಯಿಂಟ್ ಗಳನ್ನು ಗುರುತು ಮಾಡಲಾಗಿದೆ. ಇದನ್ನು ವಿಡಿಯೋ ರೆಕಾರ್ಡ್ ಮಾಡಲಾಗಿದೆ.
ತಾನು ಹೆಣ ಹೂತ ಜಾಗವನ್ನು ಮುಸುಕುಧಾರಿ ತೋರಿಸಿದ್ದು ಅಲ್ಲೆಲ್ಲ ಮಾರ್ಕ್ ಮಾಡಲಾಗಿದೆ. ನಂತರ ಪ್ರತಿ ಮಾರ್ಕ್ ಗೆ ಇಬ್ಬರಂತೆ ಒಟ್ಟು 30ಕ್ಕೂ ಹೆಚ್ಚು ಮಂದಿ ಶಸ್ತ್ರಸಜ್ಜಿತ ಎಎನ್ ಎಫ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಇವರು ರಾತ್ರಿಯಿಡೀ ಈ ಪ್ರದೇಶವನ್ನು ಪಹರೆ ಕಾಯಲಿದ್ದಾರೆ.

ಸಾಕ್ಷಿ ದೂರುದಾರ ಇನ್ನಿತರ ಕಡೆಗಳಲ್ಲೂ ಹೆಣಗಳನ್ನು ಹೂತಿರುವ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಹೇಳಲಾಗುತ್ತಿದ್ದು ಪ್ರಕರಣ ಭಾರೀ ಕುತೂಹಲ ಕೆರಳಿಸಿದೆ.

error: Content is protected !!