ಕೃಷ್ಣಾಪುರ: ವಿದ್ಯಾರ್ಥಿಗಳು ಕೇವಲ ಅಂಕಗಳಿಸುವುದನ್ನೇ ತಮ್ಮ ಗುರಿಯಾಗಿಸಿದೇ ಜೀವನದಲ್ಲಿ ಯಶಸ್ಸು ಸಾಧಿಸುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸನ್ನಡತೆ, ಗುಣಗಳನ್ನು ಅಳವಡಿಸಿದಾಗ ವಿದ್ಯಾರ್ಥಿ ಜೀವನ ಸಾರ್ಥಕ ಎಂದು ಎಸ್.ಕೆ.ಜಿ.ಐ ಕೋ- ಅಪರೇಟಿವ್ ಸೊಸೈಟಿ ಲಿ ಮಂಗಳೂರು ಇದರ ಅಧ್ಯಕ್ಷರಾದ ಪಿ. ಉಪೇಂದ್ರ ಆಚಾರ್ಯ ಅವರು ನುಡಿದರು.
ಅವರು ಪಣಂಬೂರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ.ರಿ 7ನೇ ವಿಭಾಗ ಕೃಷ್ಣಾಪುರ ಇದರ ಆಶ್ರಯದಲ್ಲಿ ಆದಿತ್ಯವಾರದಂದು ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಹಾಗೂ ಸಾಧಕರಿಗೆ ಗೌರವ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮೂಡಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಳುವಾಯಿ ಸೀತಾರಾಮ ಆಚಾರ್ಯ ಮಾತನಾಡಿ ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ಪಠ್ಯದ ಚಟುವಟಿಕೆಯಲ್ಲಿ ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಮುಂದಿನ ವಿದ್ಯಾರ್ಥಿ ಜೀವನದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವಕೀಲ ಪಿ. ಪ್ರಶಾಂತ್ ಆಚಾರ್ಯ ಮಂಗಳೂರು ಮಾತನಾಡಿ ಸಂಘ, ಸ೦ಸ್ಥೆಗಳು ತಮ್ಮ ಒಂದು ಪಾಲಿನ ದೇಣಿಗೆಯನ್ನು ವಿದ್ಯಾರ್ಥಿಗಳ ಮುಂದಿನ ಕಲಿಕಾ ಭವಿಷ್ಯಕ್ಕೆ ನೀಡಿರಿವುದನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸಾಧಕರಿಗೆ ಗೌರವಸನ್ಮಾನ ನಡೆಯಿತು. ಸಾಧಕರಾದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಹೋಲ್ಡರ್ ಮೂಡಬಿದಿರೆಯ ವಿದ್ವಾನ್ ಯಶವಂತ ಎಮ್.ಜಿ, ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಆಯ್ಕೆಯಾದ ಹರೀಶ್ ಆಚಾರ್ಯ.ಪಿ ಹಾಗೂ ದೇಹಧಾರ್ಡ್ಯ ಸ್ಪರ್ಧೆಯಲ್ಲಿ ಮಿಂಚುತ್ತಿರುವ ಯುವಪ್ರತಿಭೆ ಕೀರ್ತನ್ ಕಿಲ್ಪಾಡಿ, ಕೆಂಚನೆಕೆರೆ ಅವರುಗಳನ್ನು ಸನ್ಮಾನಿಸಲಾಯಿತು.
ಎಸ್. ಎಸ್. ಎಲ್.ಸಿ ಅತ್ಯಧಿಕ ಅಂಕ ಗಳಿಸಿದ ಕುಮಾರಿ ಮಾನ್ಯ ಆಚಾರ್ಯ ( 97.44%), ಕುಮಾರಿ ಧೃತಿ.ಕೆ ಆಚಾರ್ಯ (97.28%) ಹಾಗೂ ಪಿ.ಯು.ಸಿಯ ವಿಜ್ಞಾನ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ಶ್ರೀಜನ್ಯಾ (96.66%), ಹಾಗೂ ವಾಣಿಜ್ಯವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ಆದರ್ಶ.ಎ ಆಚಾರ್ಯ (87.16%) ಅವರುಗಳನ್ನು ಸನ್ಮಾನಿಸಲಾಯಿತು. ಹಾಗೂ ಸುಮಾರು 25ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಹಾಗೂ ದಿ.ಪಿ ಶಿವರಾಯ ಆಚಾರ್ಯ ಹಾಗೂ ದಿ. ಚಂದ್ರಾವತಿ ಆಚಾರ್ಯ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಯನ್ನು ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪಣಂಬೂರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಗೌರವಧ್ಯಕ್ಷ ಪಿ.ಕೆ ದಾಮೋದರ ಆಚಾರ್ಯ ಹೊಸಬೆಟ್ಟು ನೆರವೇರಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಗಾಯತ್ರಿ ವಿಶ್ವಬ್ರಾಹ್ಮಣ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಶ್ರೀಮತಿ.ಡಿ ಆಚಾರ್ಯ, ಶ್ರೀ ಗಾಯತ್ರಿ ಗಾನಸುಧಾ ಬಳಗ ಕೃಷ್ಣಾಪುರ ಸಂಚಾಲಕ ಮಧುಕರ್ ಆಚಾರ್ಯ, ಶ್ರೀ ವಿಶ್ವಕರ್ಮ ಭಜನಾ ಮಂಡಳಿ ಅಧ್ಯಕ್ಷ ಶ್ರೀನಿವಾಸ್ ಆಚಾರ್ಯ ಉಪಸ್ಥಿತರಿದ್ದರು.
ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಶಿಲ್ಪಿ ಆನಂದ ಆಚಾರ್ಯ ಸ್ವಾಗತಿಸಿದರು.ಯಜ್ಞೇಶ್ವರ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೃತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ತಿಕ್ ಆಚಾರ್ಯ ವಂದಿಸಿದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19