ಉತ್ತರ ಪ್ರದೇಶ: ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಹೈದರ್ ಘರ್ ಪ್ರದೇಶದ ಅವಸಾನೇಶ್ವರ ದೇವಸ್ಥಾನದ ಬಳಿ ಇಂದು ಮುಂಜಾನೆ ವಿದ್ಯುತ್ ತಂತಿಯೊಂದು ದೇವಾಲಯದ ಶೆಡ್ ಮೇಲೆ ಬಿದ್ದು ವಿದ್ಯುತ್ ಸ್ಪರ್ಶಿಸಿದ ವೇಳೆ ಭಯಭೀತರಾಗಿ ಓಡಲಾರಂಭಿಸಿದಾಗ ಭಕ್ತರು ಕಾಲ್ತುಳಿತಕ್ಕೆ ಸಿಕ್ಕಿ ಕನಿಷ್ಠ ಇಬ್ಬರು ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶ್ರಾವಣ ಸೋಮವಾರ ಆಗಿದ್ದರಿಂದ ಭಕ್ತಾದಿಗಳು ಬೆಳಿಗ್ಗೆ ಬೇಗನೆ ಶಿವನಿಗೆ ಜಲಾಭಿಷೇಕ ಮಾಡುವ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾನುವಾರ ರಾತ್ರಿಯೇ ಅವಸಾನೇಶ್ವರ ಮಹಾದೇವ ದೇವಸ್ಥಾನಕ್ಕೆ ಬಂದಿದ್ದಾರೆ. ಅದರಂತೆ ಮುಂಜಾನೆಯಿಂದಲೇ ಜಲಾಭಿಷೇಕ ಆರಂಭವಾಗಿತ್ತು ಈ ವೇಳೆ ಬೆಳಗಿನ ಜಾವ 2 ಗಂಟೆಗೆ ದೇವಸ್ಥಾನದ ಶೆಡ್ ಮೇಲೆ ವಿದ್ಯುತ್ ತಂತಿ ಬಿದ್ದು ವಿದ್ಯುತ್ ಸ್ಪರ್ಶವಾಗಿದೆ, ಇದರಿಂದ ಭಯಗೊಂಡ ಭಕ್ತರು ಓಡುವ ಭರದಲ್ಲಿ ಕಾಲ್ತುಳಿತ ಸಂಭವಿಸಿ ಈ ದುರ್ಘಟನೆ ಸಂಭವಿಸಿದೆ.
ದೇವಸ್ಥಾನದ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಕೋತಿಗಳು ತಂತಿ ಮೇಲೆ ಹಾದು ಹೋಗುವ ವೇಳೆ ತಂತಿ ತುಂಡಾಗಿ ದೇವಸ್ಥಾನ ಮೇಲೆ ಬಿದ್ದಿರುವುದು ದುರ್ಘಟನೆಗೆ ಪ್ರಮುಖ ಕರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಲ್ತುಳಿತದಲ್ಲಿ ಇಬ್ಬರು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದು 29 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಹೈದರ್‍ಗಢ ಮತ್ತು ತ್ರಿವೇದಿಗಂಜ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಜೊತೆಗೆ ಗಂಭೀರ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19