ಇರುವೈಲ್ ನಲ್ಲಿ ಅಕ್ರಮ ಕೋಳಿ ಅಂಕ: 5 ಮಂದಿ ಪೊಲೀಸರ ವಶ

ಮೂಡುಬಿದಿರೆ: ಇರುವೈಲ್ ಗ್ರಾಮದ ಸುಗ್ಗೋಣಿ ಎಂಬಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದ್ದ ವೇಳೆ ಮೂಡಬಿದ್ರೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್.ಪಿ.ಜಿ ದಾಳಿ ನಡೆಸಿದ್ದಾರೆ.

ಜು.24 ರಂದು ಸಂಜೆ 06.30 ಗಂಟೆಗೆ ಇರುವೈಲ್‌ ನಲ್ಲಿ ಕೆಲವು ವ್ಯಕ್ತಿಗಳು ಸೇರಿ ಎರಡು ಅಂಕದ ಕೋಳಿಗಳಿಗೆ ಹರಿತವಾದ ಬಾಲ್ ಗಳನ್ನು ಕಟ್ಟಿ ಹಿಂಸಾತ್ಮಕವಾಗಿ ಕಾದಾಡಲು ಬಿಟ್ಟು ಅವುಗಳ ಮುಂದೆ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದರು.

ಮಾಹಿತಿ ತಿಳಿದ ಪೊಲೀಸರು ಕಾರ್ಯಚರಣೆ ನಡೆಸಿದ್ದರು. ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿದ ಕೋಳಿ ಅಂಕದ ಜೂಜಾಟಗಾರರು ಓಡಿ ಹೋಗಲು ಪ್ರಯತ್ನಿಸಿದ್ದು, ಇನ್ನೂ ಕೆಲವರು ಪರಾರಿಯಾಗಿದ್ದಾರೆ. ಘಟನಾ ಸ್ಥಳದಲ್ಲಿ ಕೋಳಿ ಅಂಕದಲ್ಲಿ ನಿರತರಾಗಿದ್ದ ಸಂತೋಷ್ ನಾಯ್ಕ @ ಅಟ್ಟೆ ಸಂತು, ವೇದವ್, ಸಂತೋಷ್ @ ಚಿಮಣಿ ಸಂತು, ಕಿಶೋರ್ ಮತ್ತು ಪೂವಪ್ಪ ಪೂಜಾರಿ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ತಪ್ಪಿಸಿಕೊಂಡವರ ಬಗ್ಗೆ ವಿಚಾರಣೆ ನಡೆಸಿದ್ದು, ಅವರ ಹೆಸರು ಮಿಥುನ್ ಕುತ್ಯಾಡಿ, ಮಹಾಬಲ ಪೂಜಾರಿ, ವಿಷ್ಣು ಪೂಪಾಡಿ, ಜಗದೀಶ್ @ ಜಗ್ಗು ಕರ್ಪೆ, ಗುಮ್ಮಣ್ಣ, ಮನೋಜ್ ಕುಮಾರ್, ಹರೀಶ್ ತಂದೆ: ಅಚ್ಚಪ್ಪ ಪೂಜಾರಿ ಮತ್ತು ಇತರರು ಎಂಬುದಾಗಿ ತಿಳಿದುಬಂದಿದೆ.

ಅಂಕದಲ್ಲಿ ಜೂಜಾಟಕ್ಕೆ ಪಣವಾಗಿ ಉಪಯೋಗಿಸಲಿದ್ದ 4 ಹುಂಜಗಳನ್ನು ಮತ್ತು 1 ಸಾವಿರ ರೂಪಾಯಿ ವಶಕ್ಕೆ ಪಡೆದು ಆಪಾದಿತರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲಾಯಿತು.

ಸದ್ರಿ ಪ್ರಕರಣದ ಆಪಾಧಿತ ಸಂತೋಷ@ ಅಟ್ಟೆ ಸಂತು ಎಂಬುವನು ವಿರುದ್ಧ ಈ ಹಿಂದೆ ನಾಲ್ಕು ಕೋಳಿ ಅಂಕದ ಪ್ರಕರಣ ದಾಖಲಾಗಿದ್ದು ಈತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ :112(ಸಂಘಟಿತ ಅಪರಾಧ) ರಂತೆ ಕ್ರಮ ಜರುಗಿಸಲಾಗಿದೆ.

ಪೊಲೀಸ್ ಆಯುಕ್ತ ಸುಧೀರ ಕುಮಾರ್ ರೆಡ್ಡಿ ಐ.ಪಿ.ಎಸ್ ರವರ ಆದೇಶದಂತೆ ಹಾಗೂ ಉಪ ಪೊಲೀಸ್ ಆಯುಕ್ತ ಮಿಥುನ್ ಹೆಚ್.ಎನ್ ಐ.ಪಿ.ಎಸ್ (ಕಾ ಮತ್ತು ಸು) ಮತ್ತು ರವಿಶಂಕರ (ಅ ಮತ್ತು ಸ) ರವರ ಹಾಗೂ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಕಾಂತ್ ರವರ ನಿರ್ದೇಶನದಂತೆ ಆರೋಪಿಗಳ ಪತ್ತೆ ಕಾರ್ಯದಲ್ಲಿ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ಮತ್ತು ಸಿಬ್ಬಂದಿಗಳಾದ ರಾಜೇಶ, ಪ್ರದೀಪ, ಸುರೇಶ, ವೆಂಕಟೇಶ, ಚಂದ್ರಶೇಖರ ಉಮೇಶ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

 

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19

error: Content is protected !!