ಬೆಂಗಳೂರು: ರಾಜ್ಯ ಬಿಜೆಪಿ ಯುವಮೋರ್ಚಾದ ಮಾಜಿ ಕಾರ್ಯಕಾರಣಿ ಸದಸ್ಯ ಹಾಗೂ ಮಹದೇವಪುರ ಕ್ಷೇತ್ರದ ಬಿಜೆಪಿ ಯುವ ಮುಖಂಡ ಪ್ರಶಾಂತ್ ರೆಡ್ಡಿ ಕೆ.ವಿ. ಮತ್ತು ಅವರ ತಂದೆ ವಿರಾಸ್ವಾಮಿ ರೆಡ್ಡಿ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆಗೈದ ಘಟನೆ ಇಂದು ಸಂಜೆ ಆಂಧ್ರಪ್ರದೇಶದ ಬಾಪಾಟ್ಲಾ ಜಿಲ್ಲೆಯ ಸಂತಮಾಗಲೂರು ಎಂಬಲ್ಲಿ ನಡೆದಿದೆ.
ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ವಾಸ್ತವ್ಯವಿದ್ದ ಇವರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದು ನಿನ್ನೆ ವ್ಯವಹಾರ ನಿಮಿತ್ತ ತೆರಳಿದ್ದರು ಎನ್ನಲಾಗಿದೆ. ದಿನೇಶ್ ಗ್ರ್ಯಾಂಡ್ ಹೋಟೆಲ್ ನಲ್ಲಿ ತಂಗಿದ್ದ ಇವರು ತಿಂಡಿ ತಿನ್ನಲು ಹೊರಗಡೆ ಬಂದಿದ್ದ ವೇಳೆ 6 ಮಂದಿಯಿದ್ದ ತಂಡ ಕಪ್ಪು ಬಣ್ಣದ ಸ್ಕಾರ್ಪಿಯೋ ದಲ್ಲಿ ಅಪಹರಿಸಿ ಹತ್ಯೆ ಮಾಡಿದೆ ಎಂದು ಹೇಳಲಾಗುತ್ತಿದೆ.
ಕಾರ್ ನಲ್ಲಿ ಅಪಹರಿಸಿ ಕೊಂಡೊಯ್ಯುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.