ಬಂಟ್ವಾಳ: ಮೊಹಲ್ಲಾ ಸಬಲೀಕರಣ ಹಾಗೂ ಶಿಕ್ಷಕ ರಕ್ಷಕ ಸಭೆ

ಬಂಟ್ವಾಳ :ಮಸ್ಜಿದುಲ್ ಹುದಾ ತಾಳಿಪಡ್ಪು ಇದರ ವತಿಯಿಂದ ಮೊಹಲ್ಲಾ ಸಬಲೀಕರಣ ಹಾಗು ಶಿಕ್ಷಕ ರಕ್ಷಕ ಸಭೆ ತಾಳಿಪಡ್ಪು ಮೊಹಲ್ಲಾ ಜಮಾತ್ ಅಧ್ಯಕ್ಷರಾದ ಅಬ್ದುಲ್ ರಹೀಮ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಮುಹಿಯ್ಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಇದರ ಯೋಜನೆಯಡಿಯಲ್ಲಿ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಕೌನ್ಸಿಲ್ ಇದರ ಸಹಕಾರದೊಂದಿಗೆ ಜಮಾತ್ ವನ್ ಎಂಬ ಗುರಿಯನ್ನು ತಲುಪಲು ಮೊಹಲ್ಲಾ ಸಬಲೀಕರಣ ಕಾರ್ಯಗಾರ ತಾಳಿಪಡ್ಪು ಮದರಸ ಸಭಾಂಗದಲ್ಲಿ ಹಮ್ಮಿಕೊಳ್ಳಲಾಯ್ತು.

ಮೊಹಲ್ಲಾ ಸಬಲೀಕರಣ ತರಬೇತು ದಾರರಾಗಿ ಅಡ್ವಕೇಟ್ ಉಸ್ತಾದ್ ನೌಶಾದ್ ಅನ್ಸಾರಿ ಮತ್ತು ಮಿತ್ತಬೈಲ್ ಜಮಾತ್ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಆಗಮಿಸಿದ್ದರು.

ಮೊಹಲ್ಲಾ ಅಭಿವೃದ್ಧಿಯಲ್ಲಿ ಜಮಾತ್ ಪಾತ್ರ ಮತ್ತು ಪ್ರಸಕ್ತ ಮುಸ್ಲಿಂ ವಿದ್ಯಾರ್ಥಿಗಳ ಅಭಿವೃದ್ಧಿಯಲ್ಲಿ ಹೆತ್ತವರ ಜವಾಬ್ದಾರಿ ಕುರಿತು ವಿಷಯ ಮಂಡನೆ ನಡೆದು ಈ ನಿಟ್ಟಿನಲ್ಲಿ ಜಮಾತ್ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯಕ್ರಮ ಕೈಗೊಳ್ಳಲು ತೀರ್ಮಾನ ನಡೆಸಲಾಯಿತು.

ವೇದಿಕೆಯಲ್ಲಿ ತಾಳಿಪಡ್ಪು ಮೊಹಲ್ಲಾ ಖತೀಬರಾದ ಅಮೀರ್ ಅರ್ಷದಿ ಉದ್ಘಾಟನೆ ನೆರವೇರಿಸಿದರು ಕಾರ್ಯಕ್ರಮದಲ್ಲಿ SKSSF ಬಂಟ್ವಾಳ ವಲಯ ಅಧ್ಯಕ್ಷರಾದ ಇರ್ಷಾದ್ ಹುಸೈನ್ ದಾರಿಮಿ, ಪುರಸಭಾ ಸದಸ್ಯರಾದ ಹಸೈನಾರ್ ತಾಳಿಪಡ್ಪು, ಜಮಾತ್ ಮೊಹಲ್ಲಾ ಗೌರವ ಅಧ್ಯಕ್ಷರಾದ ಫಲುಲ್ ತಂಗಳ್, ಕಾರ್ಯದರ್ಶಿ ಮನ್ಸೂರ್ ಅದ್ದೇಡಿ, ಉಪಾಧ್ಯಕ್ಷರಾದ ಅಜೀಜ್, ಮಹಲ್ ಸಬಲೀ ಕರಣ ಸಮಿತಿಯ ಸರ್ವೆ ಟೀಮ್ ಸದಸ್ಯರಾದ ರಿಯಾಜ್ SK, ರಮ್ಲ ನ್, ಅಬ್ದುಲ್ ರಹಿಮಾನ್, ಆಶಿಕ್ ಮುಸ್ತಫಾ. ಪಿ. ಬಿ. ಬಷೀರ್, ಶಬೀರ್ ಸಹರ, ರಿಯಾಜ್. F. ಬಷೀರ್, ಫಾರೂಕ್, ಸಿ. ಸಿ. ಇರ್ಫಾನ್ ಉಪಸ್ಥಿತರಿದ್ದರು .

ಸದರ್ ಉಸ್ತಾದ್ ಫತವುಲ್ಲಾ ದಾರಿಮಿ ಸ್ವಾಗತಿಸಿ. ಅನಸ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಜಮಾತ್ ಸಬಲೀಕರಣದ ಲೋಗೋ ಈ ಸಂದರ್ಭದಲ್ಲಿ ಅನಾವರಣ ಗೊಳಿಸಲಾಯ್ತು.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj

 

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19

error: Content is protected !!