ಕಟಪಾಡಿ: ಉದ್ಯಾವರ ಗ್ರಾ.ಪಂ. ವ್ಯಾಪ್ತಿಯ 11ನೇ ವಾರ್ಡ್‌ನ ಪಿತ್ರೋಡಿ ಭಾಗದಲ್ಲಿ ಚರಂಡಿ ವ್ಯವಸ್ಥೆ ಸರಿ ಇಲ್ಲದೆ ಕೆಲವು ಮನೆಗಳು ಜಲಾವೃತಗೊಂಡಿದೆ. ಮನೆ ಅಂಗಳ ಮತ್ತು ಪರಿಸರದಲ್ಲಿ ನೀರು ನಿಂತು, ಬಾವಿಯ ನೀರೂ ಕೂಡ ಕಲುಷಿತವಾಗಿದೆ. ಸಾಲದ್ದಕ್ಕೆ ಶೌಚಲಯ ಗುಂಡಿಗಳೂ ಉಕ್ಕುತ್ತಿವೆ. ಇದರಿಂದ ಜನರು ಭಾರಿ ಸಮಸ್ಯೆ ಎದುರಿಸುತ್ತಿದ್ದು, ರೋಗಭೀತಿಯಲ್ಲಿದ್ದಾರೆ.
ಮಹೇಶ್ ಸುವರ್ಣ, ಸುಗಂಧಿ ಶೆಟ್ಟಿ, ಚಂದ್ರ, ನೀಲಾಧರ ಹಾಗೂ ಇನ್ನೂ 5-6 ಮನೆಗಗಳಿಗೆ ಹೋಗುವ ಮಣ್ಣಿನ ರಸ್ತೆಯಲ್ಲಿ ನೀರು ನಿಂತಿದೆ. ಪಂಚಾಯತ್‌ಗೆ ರಸ್ತೆಗಾಗಿ ಜಾಗವನ್ನು ಬಿಟ್ಟು ಕೊಟ್ಟರೂ ಚರಂಡಿ ವ್ಯವಸ್ಥೆ ನಿರ್ಮಿಸಿಲ್ಲ ಹೀಗಾಗಿ ರಸ್ತೆಯಲ್ಲಿ ನೀರು ನಿಂತು ಮನೆಯಂಗಳಕ್ಕೂ ತುಂಬಿಕೊಳ್ಳುತ್ತಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಳೆಯ ನೀರು ನಿಂತು ಕಾಲು ತುರಿಕೆ, ಕಜ್ಜಿ ಉಂಟಾಗುತ್ತಿದೆ. ಸಂಜೆಯಾಗುತ್ತಲೇ ಸೊಳ್ಳೆಯ ಕಾಟದಿಂದ ಸಾಂಕ್ರಾಮಿಕ ರೋಗ, ಮಲೇರಿಯಾ, ಡೆಂಗ್ಯೂ ಇತ್ಯಾದಿ ಮಾರಕ ರೋಗಗಳ ಭೀತಿಯು ವ್ಯಕ್ತವಾಗುತ್ತಿದೆ. ಬಾವಿಯ ನೀರು ಕಲುಷಿತಗೊಳ್ಳುತ್ತಿದೆ. ಶೌಚಾಲಯದ ಗುಂಡಿಯು ತುಂಬಿ ಉಕ್ಕೇರುತ್ತಿದ್ದು ಶೌಚಾಲಯ ಬಳಸಲೂ ಸಾಧ್ಯವಾಗುತ್ತಿಲ್ಲ .
ಉದ್ಯಾವರ ಗ್ರಾ.ಪಂ. ಆಡಳಿತ ಮತ್ತು ಅಧಿಕಾರಿ ವರ್ಗದವರು ಕೂಡಲೇ ಎಚ್ಚೆತ್ತು ಸಮರ್ಪಕವಾದ ರಸ್ತೆ ಹಾಗೂ ಮಳೆಯ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಜನರು ಆಗ್ರಹಿಸುತ್ತಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19