ʻಲವ್‌ ಜಿಹಾದ್‌ಗೆ ಸಾಕ್ಷಿ ಇಲ್ಲ, ಆದರೆ ಹೆಣ ಹುಡುಕಿದರೆ ಖಂಡಿತಾ ಸಾಕ್ಷಿ ಸಿಗುತ್ತದೆʼ: ಹಿಂದೂ ಸಂಘಟನೆಗಳಿಗೆ ʻವಿಮ್‌ʼ ಟಾಂಗ್

ಮಂಗಳೂರು: ಲವ್‌ ಜಿಹಾದ್‌ ಎಂಬುವುದಕ್ಕೆ ಸಾಕ್ಷಿಯೇ ಇಲ್ಲ ಎಂದು ಸಾಬೀತಾಗಿದ್ದರೂ, ಅದರ ಹಿಂದೆ ಸಾಗುವ ಸ್ವಯಂಘೋಷಿತ ಹಿಂದೂ ನಾಯಕರೇ ಇದೀಗ ನೀವು ಹೆಣ ಹುಡುಕಿದರೆ ಖಂಡಿತಾ ನಿಮಗೆ ಸಾಕ್ಷಿ ಸಿಗುತ್ತದೆ. ದೇಶದಲ್ಲಿಯೇ ಸಂಚಲನ ಸೃಷಿಸುವಂತೆ ನಡೆದ ಭೀಬತ್ಸ ಕೃತ್ಯದಿಂದಾಗಿ ಇಡೀ ಮಾನವ ಸಂಕುಲವೇ ತಲೆ ತಗ್ಗಿಸುವಂತಾಗಿದ್ದರೂ ನೀವ್ಯಾಕೆ ನ್ಯಾಯ ಕೊಡಿಸಲು ಮುಂದಾಗುತ್ತಿಲ್ಲ ಎಂದು ವಿಮನ್ ಇಂಡಿಯಾ ಮೂಮೆಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಪ್ರಶ್ನಿಸಿದ್ದಾರೆ.

ಮಂಗಳೂರಿನ ಎಸ್‌ಡಿಪಿಐ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಅವರು, ಅನಾಮಧೇಯ ವ್ಯಕ್ತಿ ತನ್ನಲ್ಲಿ ಸಾಕ್ಷಿ ಇದೆ, ನಾನದನ್ನು ತೋರಿಸಲು ರೆಡಿ ಇದೆ ಎಂದು ಹೇಳಿದರೂ ಇಲಾಖೆ ಯಾಕೆ ತನಿಖೆ ನಡೆಸಲು ಆಸಕ್ತಿ ತೋರಿಸುತ್ತಿಲ್ಲ? ಹೆಣ ಹೂತಿರುವ ಅನಾಮಧೇಯ ವ್ಯಕ್ತಿ, ಪಾಪಪ್ರಜ್ಞೆಯಿಂದ ಸೆಕ್ಷನ್‌ 164 ಪ್ರಕಾರ ಸಾಕ್ಷಿ ಹೇಳಲು ಮುಂದೆ ಬಂದರೂ ಅದರ ವಿಚಾರಣೆಗೆ ಪೊಲೀಸ್‌ ಇಲಾಖೆ ಮುಂದಾಗುತ್ತಿಲ್ಲ. ಆ ವ್ಯಕ್ತಿ ಜುಲೈ 3ರಂದು ಪೊಲೀಸಲ್ಲಿಗೆ ಬಂದಿದ್ದು, ಅದರ ಮದುದಿನ ಎಫ್‌ಐಆರ್‌ ದಾಖಲಾಗುತ್ತದೆ. ಆದರೆ ಇಷ್ಟು ದಿನ ಆದರೂ ಸಾಕ್ಷಿ ವಿಚಾರಣೆ ಆಗಿಲ್ಲ. ವಿಚಾರಣೆಗೆ ಇಷ್ಟು ದಿನ ಅಂತರ ಕೊಟ್ಟಿದ್ದು ಯಾಕೆ? ಇಡೀ ದೇಶದಲ್ಲಿ ಸರಣಿ ಹತ್ಯೆ, ಅತ್ಯಾಚಾರದ ಕುರಿತಂತೆ ಚರ್ಚೆ ಆಗ್ತಾ ಇದ್ದರೂ ಸರ್ಕಾರ ಈ ಪ್ರಕರಣವನ್ನು ಮುಚ್ಚಿಡುವ ಕೆಲಸ ನಡೆಸುತ್ತಿದೆ ಎಂದು ಆರೋಪಿಸಿದರು.

ಮಾಧ್ಯಮಗಳೂ ಈ ಬಗ್ಗೆ ಚರ್ಚೆ ನಡೆಸ್ತಾ ಇಲ್ಲ. ಪೊಲೀಸರು ಪ್ರತಿಭಟನೆಗೆ ಅವಕಾಶ ಕೊಡ್ತಾ ಇಲ್ಲ. ಜನರ ಅಭಿವ್ಯಕ್ತಿ ಸ್ವಾತಂತ್ರವನ್ನು ಮೊಟಕುಗೊಳಿಸಲಾಗುತ್ತಿದೆ. ಕೃತ್ಯಕ್ಕೆ ವ್ಯವಸ್ಥೆಯೇ ಶಾಮೀಲಾಗಿರುವ ಶಂಕೆ ಇದೆ. ಮುಖ್ಯಮಂತ್ರಿಯೂ ನೀರಸ ಪ್ರತಿಕ್ರಿಯೆ ಕೊಡ್ತಾ ಇದ್ದಾರೆ. ಹಾಗಾಗಿ ಜನಸಾಮಾನ್ಯರೇ ಒಟ್ಟಾಗಬೇಕು. ಹೀಗಾಗಿ ನಾವು ಹತ್ಯೆಗೀಡಾದವರಿಗೆ ನ್ಯಾಯ ಒದಗಿಸಲು ಮನೆ ಮನೆಗೆ ತೆರಳಿ ಪೋಸ್ಟರ್‌ ಅಭಿಯಾನ ನಡೆಸಿ ಜನರ ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದರು.

ಎಸ್‌ಐಟಿ ರಚನೆ ಆಗ್ರಹ
ಪ್ರಕರಣದ ಸಮಗ್ರ ತನಿಖೆ ನಡೆಸಲು ಹಾಲಿ ನ್ಯಾಯಾಧೀಶರುಳ್ಳ ಎಸ್‌ಐಟಿ ರಚನೆ ಮಾಡಬೇಕು. ಹೀಗಾದರೆ ನ್ಯಾಯ ಸಿಗಬಹುದು. ಇಲ್ಲದೇ ಹೋದರೆ ಪ್ರಕರಣ ಮುಚ್ಚಿಹೋಗುವ ಅಪಾಯವಿದೆ. ನಮ್ಮ ಸಂಘಟನೆಯ ವತಿಯಿಂದ ರಾಷ್ಟ್ರ ಮಟ್ಟದಲ್ಲಿ ಅಭಿಯಾನ ನಡೆಯಲಿದೆ ಎಂದು ಹೇಳಿದರು.

ಈ ವೇಳೆ ಮಹಿಳಾ ಮುಖಂಡರು ಪೋಸ್ಟರ್‌ ಬಿಡುಗಡೆ ಮಾಡಿದರು. ಪತ್ರಿಕಾ ಗೋಷ್ಟಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ, ರಾಜ್ಯ ಸಮಿತಿ ಸದಸ್ಯೆ ಜಮೀನಾ ಮೈಸೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಮೀಮಾ ತುಂಬೆ, ಸಾಜಿದಾ ಹಾಗೂ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯೆ ಆಯೆಷಾ ಬೆಂಗಳೂರು ಉಪಸ್ಥಿತರಿದ್ದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!