ಹೊಸದಿಲ್ಲಿ: ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಅವರು ‘ಕಿಂಗ್’ ಚಿತ್ರದ ಸೆಟ್ ನಲ್ಲಿ ಸಾಹಸ ದೃಶ್ಯದಲ್ಲಿ ಪಾಲ್ಗೊಂಡಿದ್ದ ವೇಳೆ ಗಾಯಗಳಾಗಿವೆ. ಅವರಿಗೆ ಗಂಭೀರ ಗಾಯ ಆಗಿಲ್ಲ ಹಾಗೂ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರ ತಂಡದ ಮೂಲಗಳು ತಿಳಿಸಿವೆ. ಸದ್ಯಕ್ಕೆ ಶಾರುಖ್ ಖಾನ್ ಗಾಯಗೊಂಡ ಹಿನ್ನೆಲೆ ʼಕಿಂಗ್ʼ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ.
ಶಾರೂಖ್ ಖಾನ್ ಚಿಕಿತ್ಸೆಗಾಗಿ ಬ್ರಿಟನ್ ಗೆ ತೆರಳಿದ್ದಾರೆ ಎನ್ನಲಾಗಿದೆ. ‘ಕಿಂಗ್’ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ಶಾರುಖ್ ಖಾನ್ ತನ್ನ ಪುತ್ರಿ ಸುಹಾನಾ ಖಾನ್ ಜತೆ ನಟಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ಜೈದೀಪ್ ಅಹ್ಲಾವತ್, ಅನಿಲ್ ಕಪೂರ್ ಹಾಗೂ ಅಭಯ್ ವರ್ಮಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.