ನವದೆಹಲಿ: ಯೆಮೆನ್ನಲ್ಲಿ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಪ್ರಕರಣದ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ 14ಕ್ಕೆ ಮುಂದೂಡಿದ್ದು, ಆಕೆಯ ಮರಣದಂಡನೆಯನ್ನು ತಡೆಯಲು ರಾಜತಾಂತ್ರಿಕ ಮತ್ತು ಕಾನೂನು ಪ್ರಯತ್ನಗಳಿಗೆ ಹೆಚ್ಚಿನ ಸಮಯವನ್ನು ನೀಡಿದೆ.
ಭಾರತೀಯ ಅಧಿಕಾರಿಗಳು ಮಧ್ಯಪ್ರವೇಶಿಸಿದ ನಂತರ ಜುಲೈ 16 ರಂದು ನಿಗದಿಯಾಗಿದ್ದ ಮರಣದಂಡನೆ ಮುಂದೂಡಿಕೆಯಾಗಿದೆ. ದ ನಂತರ ಈ ಮುಂದೂಡಿಕೆಯಾಗಿದೆ. ವಿಚಾರಣೆ ಸಮಯದಲ್ಲಿ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು, ಭಾರತ ಸರ್ಕಾರ ಆಕೆಯನ್ನು ಉಳಿಸಲು ತಮಗೆ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದಿದೆ.
ನಿಮಿಷಾ ಪ್ರಿಯಾ ಬಿಜಿನೆಸ್ ಪಾರ್ಟ್ನರ್ ತಲಾಲ್ ಅಬ್ದೋ ಮೆಹದಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದಾಳೆ. ನಿಮಿಷಾ ಹೇಳಿಕೆ ಪ್ರಕಾರ ಆತ ಆಕೆ ನಿರಂತರ ಕಿರುಕುಳ ನೀಡುತ್ತಿದ್ದ. ನಕಲಿ ವಿವಾಹ ದಾಖಲೆ ಕೂಡ ಮಾಡಿಸಿದ್ದ. ಹಾಗೆಯೇ ಬ್ಲಡ್ ಮನಿ ನೀಡಲು ಆಕೆಯ ಕುಟುಂಬವು ಮೃತರ ಕುಟುಂಬವನ್ನು ಸಂಪರ್ಕಿಸಿತ್ತು, ಆದರೆ ಅವರು ಒಪ್ಪಿಕೊಂಡಿಲ್ಲ. ಹೌತಿ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶದಲ್ಲಿ ನಿಮಿಷಾ ಬಂಧನದಲ್ಲಿದ್ದಾರೆ.