ಮಂಗಳೂರು: ಅಪ್ಪಟ ತುಳು ಹುಡುಗಿ, ಜನಪ್ರಿಯ ನಿರೂಪಕಿ, ಅಲ್ಲದೆ ನಟಿಯೂ ಆಗಿರುವ ಮಾತಿನ ಮಲ್ಲಿ ಅನುಶ್ರೀ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಬಂದಿದೆ.
ಮಾಹಿತಿಯ ಪ್ರಕಾರ ಈಕೆಯ ಮದುವೆ ಆಗಸ್ಟ್ 28ರಂದು ನಡೆಯಲಿದ್ದು, ಬೆಂಗಳೂರು ಮೂಲದ ಉದ್ಯಮಿ ರೋಷನ್ ಈಕೆಯ ಕೈ ಹಿಡಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಆಗಿದ್ದು, ಮನೆಯವರು ನೋಡಿದ ಹುಡುಗನನ್ನು ಅನುಶ್ರೀ ಒಪ್ಪಿದ್ದಾರೆ. ವಿಹಾನ ಮಹೋತ್ಸವ ಬೆಂಗಳೂರಿನಲ್ಲಿ ಗ್ರಾಂಡ್ ಆಗಿ ನೆರವೇರಲಿದೆ ಎಂದು ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಆದರೆ ಈ ಬಗ್ಗೆ ಅನುಶ್ರೀ ಆಗಲೀ, ಈಕೆಯ ಕುಟುಂಬಿಕರಾಗಲೀ ಅಧಿಕೃತ ಮಾಹಿತಿ ನೀಡಿಲ್ಲ.
ಮುಂದಿನ ದಿನಗಳಲ್ಲಿ ಅವರು ಈ ಬಗ್ಗೆ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ. ಈ ಹಿಂದೆಯೂ ಅನುಶ್ರೀಗೆ ಮದುವೆಯ ಸುದ್ದಿ ಹರಿದಾಡಿತ್ತು.
ಆದರೆ ಎಲ್ಲದಕ್ಕೂ ಅನುಶ್ರೀ ಮೌನವಾಗಿದ್ದರು. ಫ್ಯಾನ್ಸ್ ಕಿರಿಕಿರಿ ಅತಿಯಾದಾಗ ಸದ್ಯದಲ್ಲೇ ಆಗುತ್ತೇನೆ ಎಂದು ಕ್ಯೂರಿಯಾಸಿಟಿ ಹುಟ್ಟಿಸಿದ್ದರು. ಇದೀಗ ಮತ್ತೆ ಮದುವೆ ಸುದ್ದಿ ಹರಿದಾಡುತ್ತಿದೆ.
ಜನವರಿ 25, 1988ರಂದು ಹುಟ್ಟಿರುವ ಅನುಶ್ರೀಗೆ 37 ತುಂಬಿ 38 ಆಗುತ್ತಿದೆ ಎಂದು ಯಾರೂ ನಂಬುತ್ತಿಲ್ಲ.