ಕಡಬ: ಮೂವರು ಸಹೋದರರ ನಡುವೆ ಉಂಟಾದ ಜಗಳ ಓರ್ವನಿಗೆ ಕತ್ತಿಯಿಂದ ಕಡಿಯುವಷ್ಟರ ತನಕ ಮುಂದುವರಿದ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಆಲಂಪಾಡಿ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.
ಆಲಂಪಾಡಿ ನಿವಾಸಿ ರಾಜಶೇಖರ (37) ಕಡಿತಕ್ಕೊಳಗಾದ ವ್ಯಕ್ತಿ, ಈತನ ಸಹೋದರ ಜಯರಾಜ್ ಹಲ್ಲೆಗೈದ ಆರೋಪಿ. ಗಾಯಾಳು ರಾಜಶೇಖರನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬ ಸಹೋದರ ಮನೋಜ್ ಕುಮಾರ್ ಎಂದಯ ತಿಳಿದುಬಂದಿದೆ.
ಬುಧವಾರ ರಾತ್ರಿ ರಾಜಶೇಖರ ಆಲಂಪಾಡಿಯಲ್ಲಿರುವ ತನ್ನ ಮನೆಯಲ್ಲಿದ್ದಾಗ ಅಲ್ಲಿಗೆ ಆಗಮಿಸಿದ ಈತ ಸಹೋದರ ಮನೋಜ್ ಕುಮಾರ್ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವೇಳೆ ಇಬ್ಬರ ನಡುವೆಯೂ ಜಗಳ ನಡೆದಿದೆ. ಅಷ್ಟರಲ್ಲಿ ಮತ್ತೊಬ್ಬ ಸಹೋದರ ಜಯರಾಜ್ ಕೂಡಾ ಬಂದಿದ್ದಾನೆ. ಇಬ್ಬರ ಗಲಾಟೆಯನ್ನು ಸಿಟ್ಟಿಗೆದ್ದ ಜಯರಾಜ್ ರಾಜಶೇಖರನನ್ನು ಕತ್ತಿಯಿಂದ ಕಡಿದು ಗಂಭೀರ ಗಾಯಗೊಳಿಸಿದ್ದಾಗು ರಾಜಶೇಖರ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಸಿದ್ದಾರೆ.
ಈ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಅಕ್ರ: 63/2025 ಕಲಂ: 352, 118(1) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.