ಶಾರ್ಜಾ: ಕಿರುಕುಳದಿಂದ ಬೇಸತ್ತು ಕೇರಳದ ಮಹಿಳೆಯೊಬ್ಬಳು ಮಗುವನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಾರ್ಜಾದಲ್ಲಿ ನಡೆದಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಲ್ಲಿ ವಿಪಂಜಿಕಾ ಮಣಿ ಎಂಬಾಕೆ ತನ್ನ ಒಂದೂವರೆ ವರ್ಷದ ಮಗಳು ವೈಭವಿಯನ್ನು ಹತ್ಯೆ ಮಾಡಿ ಬಳಿಕ ಪ್ರಾಣ ಕಳೆದುಕೊಂಡಿದ್ದಾರೆ.
ವಿಪಂಜಿಕಾ ಮಣಿ ಶಾರ್ಜಾದ ಅಲ್ ನಹ್ದಾದಲ್ಲಿ ವಾಸಿಸುತ್ತಿದ್ದರು. ಪ್ರಕರಣದಲ್ಲಿ ವಿಪಂಜಿಕಾ ಅವರ ಪತಿ ನಿಧೀಶ್ ಅವರನ್ನು ಮೊದಲ ಆರೋಪಿಯನ್ನಾಗಿ ಆರೋಪಿಸಲಾಗಿದೆ, ನಂತರ ಅವರ ಸಹೋದರಿ ನೀತು ಮತ್ತು ಅವರ ತಂದೆಯನ್ನು ಹೆಸರಿಸಲಾಗಿದೆ. ವರದಕ್ಷಿಣೆಗಾಗಿ ವಿಪಂಜಿಕಾ ಅವರಿಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ತಾಯಿಯ ದೂರಿನ ಪ್ರಕಾರ, ಕೊಟ್ಟ ವರದಕ್ಷಿಣೆ ಸಾಕಾಗುವುದಿಲ್ಲ ಎಂದು ಹೇಳಿ ವಿಪಂಜಿಕಾಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿದ್ದರು. ಆಕೆ ತುಂಬಾ ಸುಂದರವಾಗಿದ್ದು, ಆಕೆಯ ಗಂಡನ ಬಣ್ಣಕಪ್ಪು ಹೀಗಾಗಿಆಕೆಯೂ ಕೂಡ ಕೆಟ್ಟಾಗಿ ಕಾಣೇಕೆಂದು ಆಕೆಯ ತಲೆ ಬೋಳಿಸಿದ್ದ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ, ತಲೆ ಬೋಳಿಸುವ ಮೂಲಕ ಆಕೆಯ ನೋಟವನ್ನು ಉದ್ದೇಶಪೂರ್ವಕವಾಗಿ ಬದಲಾಯಿಸಲಾಗಿದೆ ಮತ್ತು ತನ್ನ ಗಂಡನ ವಿವಾಹೇತರ ಸಂಬಂಧಗಳನ್ನು ಪ್ರಶ್ನಿಸಿದಾಗ ಆಕೆಗೆ ವಿಚ್ಛೇದನ ನೋಟಿಸ್ ನೀಡಲಾಗಿದೆ ಎಂದು ಅದು ಹೇಳುತ್ತದೆ.
ಕೊಲ್ಲಂ ಮೂಲದ ವಿಪಂಜಿಕಾ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಆತ್ಮಹತ್ಯೆ ಪತ್ರವನ್ನು ಪೋಸ್ಟ್ ಮಾಡಿದ್ದಲ್ಲದೆ, ಆಕೆಯ ಮಾವ ಕೂಡ ಲೈಂಗಿಕ ಕಿರುಕುಳ ನೀಡಿದ್ದ ಎಂಬುದು ತಿಳಿದುಬಂದಿದೆ.
ಆತ್ಮಹತ್ಯೆ ಪತ್ರದಲ್ಲಿ ವಿಪಂಜಿಕಾ ತನ್ನ ಗಂಡನ ಮನೆಯಲ್ಲಿ ಅನುಭವಿಸಿದ ಕ್ರೂರ ಚಿತ್ರಹಿಂಸೆಯನ್ನು ಸಹ ವಿವರಿಸಿದ್ದಾಳೆ ಎಂದು ವರದಿಯಾಗಿದೆ. ಮಾವ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾನೆ ಮತ್ತು ನಿಧೀಶ್‌ಗೆ ಅದರ ಬಗ್ಗೆ ತಿಳಿಸಿದಾಗ, ಅವನು ಏನೂ ಮಾಡಲಿಲ್ಲ ಮತ್ತು ತನ್ನ ತಂದೆಗಾಗಿಯೂ ಅವಳನ್ನು ಮದುವೆಯಾಗಿದ್ದೇನೆಂದು ಹೇಳಿದ್ದ, ನನಗೆ ಚಿತ್ರಹಿಂಸೆ ನೀಡಿ ನಾಯಿಯಂತೆ ಹೊಡೆದನು. ನನಗೆ ಇನ್ನು ಸಹಿಸಲು ಸಾಧ್ಯವಿಲ್ಲ, ಅವರನ್ನು ಬಿಡಬೇಡಿ ಎಂದು ಆಕೆ ಬರೆದಿದ್ದಳು.
ಮಗಳೊಂದಿಗೆ ಮಾತನಾಡಿದ್ದೆ ಆದರೆ ಇಷ್ಟೊಂದು ಹಿಂಸೆ ಆಕೆಗಾಗುತ್ತಿದೆ ಎಂದು ನನಗೆ ತಿಳಿದಿರಲಿಲ್ಲ. ಆರೋಪಿಗೆ ಶಿಕ್ಷೆಯಾಗಬೇಕು, ಆಗ ಮಾತ್ರ ಮಗಳ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ ಎಂದು ಹೇಳಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.