ಮಂಗಳೂರು: ಸುರತ್ಕಲ್ನಲ್ಲಿರುವ ಎಂಆರ್ಪಿಎಲ್ನಲ್ಲಿ ಶನಿವಾರ ವಿಷಾನಿಲ ಸೋರಿಕೆಯಾಗಿ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿತ್ತು. ಎಂಆರ್ಪಿಎಲ್ನ ಒಎಂಎಸ್ ವಿಭಾಗದ ಟ್ಯಾಂಕ್ ಎಫ್.ಬಿ.7029 ನಲ್ಲಿ ದುರಂತ ಸಂಭವಿಸಿತ್ತು. ಆಯಿಲ್ ಮೂವ್ಮೆಂಟ್ ವಿಭಾಗದಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಪ್ರಯಾಗ್ ರಾಜ್ ಮೂಲದ ಸಿಬ್ಬಂದಿ ದೀಪ್ ಚಂದ್ರ ಭಾರ್ತಿಯಾ(33), ಕೇರಳ ಮೂಲದ ಬಿಜಿಲ್ ಪ್ರಸಾದ್(33), ಗದಗ ಮೂಲದ ವಿನಾಯಕ ಮಯಗೇರಿ ಸೇರಿದಂತೆ ಐವರು ಪರಿಶೀಲಿಸಲು ಹೋಗಿದ್ದರು. ಈ ವೇಳೆ ಹೆಚ್2ಎಸ್ ವಿಷಾನಿಲ ಸೋರಿಕೆಯಾಗಿ ದೀಪ್ ಚಂದ್ರ ಮತ್ತು ಬಿಜಿಲ್ ಪ್ರಸಾದ್ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು.
ಇವರ ರಕ್ಷಣೆಗೆ ಮುಂದಾದ ವಿನಾಯಕ್ ಸೇರಿದಂತೆ ಮೂವರ ಕೂಡ ಅಸ್ವಸ್ಥರಾಗಿದ್ದರು. ಮೃತರ ಮರಣೋತ್ತರ ಪರೀಕ್ಷೆ ಭಾನುವಾರ ನಡೆದಿತ್ತು. ನಂತರ ಮೃತರಿಬ್ಬರ ಮೃತದೇಹಗಳನ್ನು ಅವರವರ ರಾಜ್ಯಗಳಿಗೆ ಕಳುಹಿಸಿಕೊಡಲಾಗಿದೆ. ಆದರೆ ಉತ್ತರ ಪ್ರದೇಶದ ಪ್ರಯಾಗ್ರಾಜ್ಗೆ ಮೃತದೇಹದ ಜೊತೆ ಹೋದ ಎಂಆರ್ಪಿಎಲ್ ನ ಐದು ಸಿಬ್ಬಂದಿಗೆ ದಿಗ್ಭಂಧನ ಮಾಡಿ ಐವರನ್ನು ದೀಪ್ ಚಂದ್ರ ಕುಟುಂಬಸ್ಥರು ಮತ್ತು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ಎಂಆರ್ಪಿಎಲ್ ಮ್ಯಾನೇಜ್ಮೆಂಟ್ ಈವರೆಗೂ ಘಟನೆಯ ಕುರಿತು ಸರಿಯಾಗಿ ಸ್ಪಂದನೆ ನೀಡಿಲ್ಲ, ಪರಿಹಾರದ ಬಗ್ಗೆಯೂ ಮಾತನಾಡಿಲ್ಲ. ಅವರು ತಕ್ಷಣ ಇಲ್ಲಿಗೆ ಬರಬೇಕು. ಅಲ್ಲಿವರೆಗೂ ನೀವು ಇಲ್ಲಿಂದ ಹೋಗುವಂತಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಐವರು ಅಲ್ಲಿಂದ ಎಂಆರ್ಪಿಎಲ್ಗೆ “ಕೂಡಲೇ ಇಲ್ಲಿಗೆ ಬಂದು ನಮ್ಮ ರಕ್ಷಣೆ ಮಾಡಿ” ಎಂದು ವಿಡಿಯೋ ಸಂದೇಶ ಕಳುಹಿಸುವ ಮೂಲಕ ಮೊರೆ ಇಟ್ಟಿದ್ದಾರೆ.
ಎಂಆರ್ಪಿಎಲ್ ಸಿಬ್ಬಂದಿ ಪ್ರಸಾದ್, ಬಲ್ಬೀರ್, ಸುರೇಂದ್, ಬಾಲನಾರಾಯಣ್, ಪಂಕಜ್ಗೆ ದಿಗ್ಭಂಧನ ಹಾಕಲಾಗಿದ್ದು, ಸುರತ್ಕತ್ ಪೊಲೀಸ್ ಠಾಣೆಯಲ್ಲಿ ಫ್ಯಾಕ್ಟರಿ ಮ್ಯಾನೇಜರ್ ಸೇರಿದಂತೆ ವಿಷಾನಿಲ ಸೋರಿಕೆ ಸಂಬಂಧ 6 ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಆದರೆ ಈವರೆಗೂ ಯಾರ ಮೇಲೂ ಕ್ರಮ ಕೈಗೊಂಡಿಲ್ಲ ಎಂದು ಮೃತರ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t