ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗಂಜಿಮಠ ಗ್ರಾಮ ಪಂಚಾಯತ್ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಬಡಗುಳಿಪಾಡಿ ಗ್ರಾಮದ ನಾಲ್ಕನೇ ವಾರ್ಡಿನ ಪೂವಾರು ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಇಂದು ನಡೆಯಿತು.
.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಶಾಸಕರಾದ ಡಾ ಭರತ್ ಶೆಟ್ಟಿ ವೈ, ಅಧ್ಯಕ್ಷತೆಯನ್ನು ಮಾಲತಿ ಎಂ, ಹಾಗೂ ಮುಖ್ಯ ಅತಿಥಿಗಳಾಗಿ ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ. ಕಾರಿಗಿ, ಗಂಜಿಮಠ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಾರಮ್ಮ, ಬಾಲವಿಕಾಸದ ಅಧ್ಯಕ್ಷರಾದ ಪೂಜಾ ರಾಜೇಶ್, ಸ್ಥಳದಾನ ನೀಡಿದ ರಾಮಚಂದ್ರ ನಾವುಡ ಸ್ಥಳೀಯ ಪಂಚಾಯತ್ ಸದಸ್ಯರಾದ ತಮ್ಮಯ್ಯ ಪೂಜಾರಿ ಪ್ರವೀಣ್ ಶೆಟ್ಟಿ, ಲೋಲಾಕ್ಷಿ ಕುಲಾಲ್, ಇಂದಿರಾಕ್ಷಿ ಶೆಟ್ಟಿ, ಆಗಮಿಸಿದ್ದರು. ಈ ಸುಸಂಧರ್ಭದಲ್ಲಿ ಸ್ಥಳದಾನ ನೀಡಿದ ರಾಮಚಂದ್ರ ನಾವುಡರಿಗೆ, ಗುತ್ತಿಗೆದಾರರಾದ ಶ್ರವಣ್ ಶೆಟ್ಟಿ ಮೊಗರು, ಹಾಗೂ ಹಲವು ವರುಷಗಳಿಂದ ಅಂಗನವಾಡಿಯ ಸಹಾಯಕಿಯಾಗಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ ರಾಧ, ಇವರಿಗೆ ಸನ್ಮಾನ ಮಾಡಿ ಅಭಿನಂದಿಸಲಾಯಿತು.
ಉತ್ತರ ಮಂಡಲದ ಉಪಾಧ್ಯಕ್ಷರಾದ ಶೋಹನ್ ಅತಿಕಾರಿ, ಉತ್ತರ ಮಂಡಲದ ಕಾರ್ಯದರ್ಶಿಯವರಾದ ರೇಖಾ ರಾಜೇಶ್, ಮಾದ್ಯಮದ ಸಂಚಾಲಕರಾದ ಶ್ರವಣ್ ಶೆಟ್ಟಿ ಮೊಗರು, ಒಬಿಸಿ ಮೋರ್ಚಾದ ಸದಸ್ಯರಾದ ಮಾಧವ ಕಾಜಿಲ, ಬಡಗುಳಿಪಾಡಿ ಶಕ್ತಿಕೇಂದ್ರದ ಅಧ್ಯಕ್ಷರಾದ ತೋಮಸ್ ಸಿಕ್ವೇರಾ, ಬಡಗುಳಿಪಾಡಿ ಬೂತ್ ಸಂಖ್ಯೆ ರ ಅಧ್ಯಕ್ಷರಾದ ಸಂತೋಷ್ ಪೂಜಾರಿ, ಕಾರ್ಯದರ್ಶಿ ಪುರಂದರ್ ಕುಲಾಲ್, ಪಂಚಾಯತ್ ಸದಸ್ಯರು, ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.