ಟೀಸರ್‌ನಲ್ಲಿಯೇ ಕುತೂಹಲ ಹುಟ್ಟಿಸಿದ್ದ ʻಧರ್ಮ ಚಾವಡಿʼ ಜುಲೈ 11ಕ್ಕೆ ಬಿಡುಗಡೆ

ಮಂಗಳೂರು: ಕೃಷ್ಣವಾಣಿ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾದ ನಡುಬೈಲ್ ಜಗದೀಶ್ ಅಮೀನ್ ನಿರ್ಮಾಣದಲ್ಲಿ ನಿತಿನ್ ರೈ ಕುಕ್ಕವಳ್ಳಿ ನುಳಿಯಾಲು ನಿರ್ದೇಶನದಲ್ಲಿ ತಯರಾದ “ಧರ್ಮ ಚಾವಡಿ” ತುಳು ಚಿತ್ರ ಜುಲೈ 11 ರಂದು ಬಿಡುಗಡೆಗೊಳ್ಳಲಿದೆ ಎಂದು ಹಿರಿಯ ನಟ ರಮೇಶ್ ರೈ ಕುಕ್ಕುವಳ್ಳಿ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಚಿತ್ರದ ನಿರ್ದೇಶಕ ನಿತಿನ್ ರೈ ಕುಕ್ಕವಳ್ಳಿ  ನುಳಿತಾಲು ಮಾತನಾಡಿ, ಧರ್ಮದೈವ ನಿರ್ದೇಶನ ಮಾಡಿದ ಬಳಿಕ “ಧರ್ಮ ಚಾವಡಿ’ ನನ್ನ ಎರಡನೇ ಚಿತ್ರವಾಗಿದೆ. ಚಿತ್ರದ ಟೀಸರ್ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಮುಂಬೈಯಲ್ಲಿ ಸಿನಿಮಾದ ಪ್ರೀಮಿಯರ್ ಶೋ ವೀಕ್ಷಿಸಿದ ಪ್ರೇಕ್ಷಕರು ಸಿನಿಮಾವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಿನಿಮಾ ಹೊಸ ನಿರೀಕ್ಷೆ ಹುಟ್ಟು ಹಾಕಿದೆ. ಸಾಕಷ್ಟು ಜನರು ಇದು ಧರ್ಮ ದೈವದ ಮುಂದುವರೆದ ಭಾಗ ಎಂದು ಭಾವಿಸಿದ್ದರು, ಆದರೆ ಟೀಸರ್ ಬೇರೆಯೇ ರೀತಿಯಲ್ಲಿದ್ದು ಬಹಳಷ್ಟು ಕುತೂಹಲವನ್ನು ಹುಟ್ಟಿಹಾಕಿತ್ತು. ಮುಂಬೈ ಮತ್ತು ಪುತ್ತೂರಿನಲ್ಲಿ ನಡೆದ ಪ್ರೀಮಿಯರ್ ನೋಡಿದ ಜನ ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟು 2.30 ಗಂಟೆಗಳ ಅವಧಿಯ ಸಿನಿಮಾ ಆಗಿದ್ದು, ಸಮಯ ಹೋಗುವುದೇ ತಿಳಿಯುವುದಿಲ್ಲ. ಕೇರಳ ಕರ್ನಾಟಕ ಗಡಿಭಾಗಗಳಲ್ಲಿ ಶೂಟಿಂಗ್‌ ಮಾಡಿದ್ದು, 120 ಮಂದಿ ಕಲಾವಿದರು ನಟಿಸಿದ್ದಾರೆ. ದೈವಕ್ಕೆ ಅವಮಾನ ಆಗುವಂತ ಯಾವುದೇ ದೃಶ್ಯಗಳು ಇದರಲ್ಲಿ ಇಲ್ಲ. ಎಲ್ಲರೂ ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸುವಂತೆ ವಿನಂತಿಸಿದರು.

ಚಿತ್ರದ ನಿರ್ಮಾಪಕ ನಡುಬೈಲ್‌ ಜಗದೀಶ್‌ ಅಮೀನ್‌ ಮಾತಾಡಿ, ಕಥೆ ಒಳ್ಳೆದುಂಟು, ಟೀಂ ಒಳ್ಳೆದುಂಟು ಎಂದು ಈ ಚಿತ್ರಕ್ಕೆ ನಿರ್ಮಾಣ ಮಾಡಿದ್ದೇನೆ. ಧರ್ಮ ಚಾವಡಿ ಎಲ್ಲರ ಮನೆಯಲ್ಲೂ ಇದೆ. ಅದಕ್ಕೆ ತನ್ನದೇ ಆದ ಗೌರವ, ಘನತೆ ಇದೆ. ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ ಎಂದರು.

Dharma Chavadi (2025) - Movie | Reviews, Cast & Release Date in dharwad- BookMyShow

ಚಿತ್ರದ ಪ್ರಮುಖ ನಟಿ ಧನ್ಯ ಪೂಜಾರಿ ಮಾತನಾಡಿ, ಫ್ರೀಮಿಯರ್‌ ಶೋ ನೋಡಿದಾಗ ನನಗೆ ತುಂಬಾ ಅಚ್ಚರಿಯಾಗಿದೆ. ಚಿತ್ರ ಸೂಪರ್‌ ಆಗಿದ್ದು, ನನ್ನಂತಹ ಅನೇಕ ಕಲಾವಿದರಿಗೆ ಈ ಚಿತ್ರ ಹೊಸ ಭವಿಷ್ಯವನ್ನು ರೂಪಿಸಿದೆ ಎಂದರು. ಮತ್ತೋರ್ವರು ನಟಿ ನೇಹಾ ಕೋಟ್ಯಾನ್‌ ಮಾತನಾಡಿ, ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್‌ ಇರುವ ಮೂವಿ ಎಲ್ಲರೂ ನಮಗೆ ಸಪೋರ್ಟ್‌ ಮಾಡಿ ಎಂದರು.

ನಟ ರಮೇಶ್‌ ರೈ ಕುಕ್ಕುವಳ್ಳಿ ಕಲಾವಿದರನ್ನು ಪರಿಚಯಿಸಿದರು. ಚಿತ್ರದ ಸಂಗೀತ ನಿರ್ದೇಶಕ ಸಂಗೀತ ಪ್ರಸಾದ್ ಕೆ. ಶೆಟ್ಟಿ, ಛಾಯಾಗ್ರಾಹಕ ಅರುಣ್ ರೈ ಪುತ್ತೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ದ.ಕ. ಹಾಗೂ ಉಡುಪಿಯಲ್ಲಿ ಬಿಡುಗಡೆ
ಚಿತ್ರಕ್ಕೆ ಪ್ರಸಾದ್ ಕೆ. ಶೆಟ್ಟಿ ಸಂಗೀತ, ಶ್ರೀನಾಥ್ ಪವಾರ್ ಸಂಕಲನ, ಅರುಣ್ ರೈ ಪುತ್ತೂರು ಛಾಯಾಗ್ರಹಣ ಚಿತ್ರಕ್ಕಿದ್ದು ರಜಾಕ್ ಪುತ್ತೂರು ಚಿತ್ರಕಥೆ ಬರೆದಿದ್ದಾರೆ. ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ರವಿ ಸ್ನೇಹಿತ್, ಚೇತನ್ ರೈ ಮಾಣಿ, ಸುರೇಶ್ ರೈ, ಪ್ರಕಾಶ್ ಧರ್ಮ ನಗರ, ದೀಪಕ್ ರೈ ಪಾಣಾಜಿ,ಸುಂದರ್ ರೈ ಮಂದಾರ, ರಂಜನ್ ಬೋಲೂರು, ಮನೀಶ್ ಶೆಟ್ಟಿ ಸಿದ್ದಕಟ್ಟೆ, ರಕ್ಷಣ್ ಮಾಡೂರು, ರೂಪ ಡಿ. ಶೆಟ್ಟಿ ಸವಿತಾ ಅಂಚನ್, ಧನ್ಯ ಪೂಜಾರಿ, ನೇಹಾ ಕೋಟ್ಯಾನ್‌, ನಿಶ್ಮಿತಾ ಶೆಟ್ಟಿ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಸಚಿನ್ ಉಪ್ಪಿನಂಗಡಿ ಚಿತ್ರದ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದಾರೆ. ಚಿತ್ರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಥಿಯೇಟರ್‌ಗಳಲ್ಲಿ ಬಿಡುಗಡೆಗೊಳ್ಳುತ್ತಿದೆ. 

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!