ಗುಜರಾತ್: ಅಪಾಯಕಾರಿ ಸ್ಥಿತಿಯಲ್ಲಿದ್ದ ಸೇತುವೆ ಕುಸಿತ: 4 ವಾಹನಗಳು ಮುಳುಗಡೆ, 8 ಸಾವು

ಅಹಮದಾಬಾದ್: ಗುಜರಾತ್‌ ವಡೋದರಾದ ಪದ್ರಾ ತಾಲೂಕಿನ ಮುಜ್ಪುರ ಬಳಿ ಗಂಭೀರ ಸೇತುವೆಯ ಒಂದು ಭಾಗ ಕುಸಿತಗೊಂಡು ಐದು ವಾಹನಗಳು ಮಹಿಸಾಗರ್‌ ನದಿಗೆ ಬಿದ್ದ ಘಟನೆ ನಡೆದಿದೆ. ಎರಡು ಟ್ರಕ್‌ಗಳು, ಒಂದು ಪಿಕಪ್ ವ್ಯಾನ್ ಮತ್ತು ಇನ್ನೊಂದು ವಾಹನಗಳು ಕೆಳಗೆ ಬಿದ್ದಿದೆ. ವಾಹನಗಳಿಂದ ಮೂವರನ್ನು ರಕ್ಷಿಸಲಾಗಿದ್ದು, 8 ಮಂದಿ ಮೃತಪಟ್ಟಿದ್ದಾರೆ.


ಇಂದು ಬೆಳಗ್ಗೆ 7:45 ರ ಸುಮಾರಿಗೆ ಸೇತುವೆ ಕುಸಿದಿದೆ. ಈ ಸೇತುವೆ ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು. 45 ವರ್ಷದ ಹಳೆಯ ಸೇತುವೆ ಇದಾಗಿದ್ದು ಬಹಳ ಹಿಂದಿನಿಂದಲೂ ಅಪಾಯಕಾರಿ ಸ್ಥಿತಿಯಲ್ಲಿತ್ತು. ಅದರ ಶಿಥಿಲಾವಸ್ಥೆಯ ಬಗ್ಗೆ ಸ್ಥಳೀಯರು ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರು. ತುರ್ತು ದುರಸ್ತಿ ಅಥವಾ ಹೊಸ ರಚನೆಗಾಗಿ ಮನವಿ ಮಾಡಿದ್ದರು ಎಂದು ವರದಿಯಾಗಿದೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!