ಹೊಸದಿಲ್ಲಿ: ಯೆಮನ್ ಪ್ರಜೆಯನ್ನು ಕೊಂದ ಆರೋಪದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾಗೆ ಈ ತಿಂಗಳ 16ರಂದು ಮರಣದಂಡನೆ ವಿಧಿಸಲು ಹೌದಿ ಬಂಡುಕೋರರ ಹಿಡಿತದಲ್ಲಿರುವ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ಸಿದ್ಧತೆ ನಡೆಸಿದ್ದು, ಈಕೆಯನ್ನು ನೇಣಿನಕುಣಿಕೆಯಿಂದ ಪಾರು ಮಾಡಲು ಅಂತಿಮ ಪ್ರಯತ್ನ ನಡೆಯುತ್ತಿದೆ.
ಆದರೆ ಯೆಮೆನ್‌ನಲ್ಲಿ ಆಂತರಿಕ ನಾಗರಿಕ ಯುದ್ಧ ನಡೆಯುತ್ತಿರುವುದರಿಂದ ಅಲ್ಲಿನ ಎಲ್ಲಾ ಅಧಿಕಾರ ಅಲ್ಲಿನ ಸರ್ಕಾರದಲ್ಲಿ ಇಲ್ಲ. ಪ್ರಸ್ತುತ ಈಕೆಗೆ ಗಲ್ಲು ಶಿಕ್ಷೆ ವಿಧಿಸಿರುವುದು ಹೌದಿ ಬಂಡುಕೋರರ ನಿಯಂತ್ರಣದಲ್ಲಿರುಸುಪ್ರೀಂ ಜುಡಿಷಿಯಲ್ ಕೌನ್ಸಿಲ್. ಇದು ಜಾಗತಿಕ ಮನ್ನಣೆಯನ್ನು ಹೊಂದಿರುವ ಯೆಮೆನ್ ರಶಾದ್ ಅಲ್-ಅಲಿಮಿ ಆಡಳಿತಕ್ಕಿಂತ ಭಿನ್ನವಾಗಿದೆ. ಆದರೆ ಇಲ್ಲಿ ಆ ಬಳಿಕ ಇಲ್ಲಿ ಆಂತರಿಕ ಯುದ್ಧ ಉಂಟಾಗಿ ಯೆಮೆನ್ ತನ್ನ ಗಡಿಗಳನ್ನು ಪುನರ್ರಚಿಸಿತು. ದುರದೃಷ್ಟವಶಾತ್ ಪ್ರಿಯಾ ಅಲ್ಲಿಗೆ ಹೋದ ವರ್ಷವು ಸಂಭಾವ್ಯ ಶಾಂತಿಯ ಕಡೆಗೆ ಅಧಿಕಾರದ ಪರಿವರ್ತನೆಯಾಗಿತ್ತು. ನವೆಂಬರ್ 2011 ರಲ್ಲಿ, ಆಗಿನ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ ಅಧಿಕಾರವನ್ನು ತಮ್ಮ ಉಪನಾಯಕನಿಗೆ ಹಸ್ತಾಂತರಿಸಿದರು. ಆದರೆ ಈ ಪರಿವರ್ತನೆಯು ಸಂಘರ್ಷವನ್ನು ನಿಲ್ಲಿಸಲಿಲ್ಲ.

2014 ರಲ್ಲಿ, ಬಂಡಾಯ ಗುಂಪು ಹೌತಿಸ್ ಸನಾವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಈ ಸಂಘರ್ಷದಿಂದ ಪ್ರಿಯಾಳ ಪತಿ ಮತ್ತು ಮಗು ಭಾರತಕ್ಕೆ ಹಿಂತಿರುಗಲು ಸಾಧ್ಯವಾಗದೆ ಅಲ್ಲಿಯೇ ಸಿಲುಕಿಕೊಂಡಳು. ಸದ್ಯ ನರ್ಸ್ ನಿಮಿಷಾ ಪ್ರಿಯ ಇರುವ ಪ್ರದೇಶ ಯೆಮೆನ್ ನಿಯಂತ್ರಣದಲ್ಲಿರದೆ ಹೌತಿಸ್ ಬಂಡುಕೋರ ನಿಯಂತ್ರಣದಲ್ಲಿರುವುದರಿಂದ ಭಾರತದ ಅಧಿಕಾರಿಗಳಿಗೆ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.

ಆದರೂ ಅಂತಿಮ ಪ್ರಯತ್ನ ನಡೆಯಿತ್ತಿದೆ. ಯೆಮೆನ್‌ನಲ್ಲಿರುವ ಸರ್ಕಾರಿ ಅಧಿಕಾರಿಗಳು ಮತ್ತು ತಲಾಲ್ ಅವರ ಕುಟುಂಬದೊಂದಿಗೆ ಮಾತುಕತೆ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ಯಾಮ್ಯುಯೆಲ್ ಜೆರೋಮ್ ಭಾಸ್ಕರನ್, ಮರಣದಂಡನೆ ರದ್ದುಪಡಿಸುವಂತೆ ಜೈಲು ಅಧಿಕಾರಿಗಳಿಗೆ ಸಾರ್ವಜನಿಕ ಅಭಿಯೋಜಕರ ಪತ್ರ ನೀಡಿದ್ದಾರೆ. ಆದಾಗ್ಯೂ, ಭಾರತ ಸರ್ಕಾರವು ಆಕೆಯ ಜೀವವನ್ನು ಉಳಿಸಲು ಇನ್ನೂ ಮಧ್ಯಪ್ರವೇಶಿಸಬಹುದು ಎಂದು ಭಾಸ್ಕರನ್ ಹೇಳಿದರು.
ಸರ್ಕಾರವು ಸ್ಥಳೀಯ ಅಧಿಕಾರಿಗಳು ಮತ್ತು ಪ್ರಿಯಾ ಅವರ ಕುಟುಂಬ ಸದಸ್ಯರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದೆ ಎಂದು ANI ಗೆ ವರದಿ ಮಾಡಿದೆ. ಆದರೆ ಭಾರತದ ಕಡೆಯವರು ಹೌತಿ ಬಂಡುಕೋರರೊಂದಿಗೆ ಯಾವುದೇ ಔಪಚಾರಿಕ ರಾಜತಾಂತ್ರಿಕ ಸಂಪರ್ಕಗಳನ್ನು ಹೊಂದಿಲ್ಲದ ಕಾರಣ ಪ್ರಕರಣ ಜಟಿಲವಾಗಿ ಪರಿಣಮಿಸಿದೆ. “ದಿಯತ್” ಅಥವಾ ಬಲಿಪಶುವಿನ ಕುಟುಂಬಕ್ಕೆ ʻಬ್ಲಡ್ ಮನಿʼ ಪಾವತಿಸುವ ಇಸ್ಲಾಮಿಕ್ ಸಂಪ್ರದಾಯದ ಮೂಲಕ ಪ್ರಿಯಾಳ ಬಿಡುಗಡೆಯನ್ನು ಪಡೆಯಲು ಮಾಡಿದ ಪ್ರಯತ್ನಗಳು ವಿಫಲವಾಗಿದೆ. ಯಾಕೆಂದರೆ ಹೌತಿ ಬಂಡುಕೋರರು ಬ್ಲಡ್ ಮನಿ ಮೇಲೆ ನಂಬಿಕೆ ಹೊಂದಿಲ್ಲ ಎನ್ನಲಾಗುತ್ತಿದೆ.
ಪ್ರಿಯಾಳ ತಾಯಿ ಪ್ರೇಮಕುಮಾರಿ ಕಳೆದ ವರ್ಷ ʻಬ್ಲಡ್ ಮನಿʼ ಮಾತುಕತೆ ನಡೆಸಲು ಯೆಮನ್‌ಗೆ ಪ್ರಯಾಣ ಬೆಳೆಸಿದ್ದರು. ಯೆಮನ್‌ನಲ್ಲಿರುವ ಅನಿವಾಸಿ ಭಾರತೀಯರ ಗುಂಪು ಹಣ ಸಂಗ್ರಹಿಸಲು ನೆರವಾಗಿದ್ದವು. ಅದ್ಯಾಗ್ಯೂ ನಿಮಿಷಾಳನ್ನು ಸಾವಿನ ಕುಣಿಕೆಯಿಂದ ಈಕೆಯನ್ನು ಪಾರು ಮಾಡಲು ಭಾರತೀಯ ಅಧಿಕಾರಿಗಳು ವ್ಯಾಪಕ ಪ್ರಯತ್ನ ಮಾಡುತ್ತಿದ್ದಾರೆ. ವ್ಯಾಪಾರ ಪಾಲುದಾರನಾಗಿದ್ದ ಯೆಮನ್ ಪ್ರಜೆಯನ್ನು ಹತ್ಯೆ ಮಾಡಿದ ಆರೋಪದಲ್ಲಿ 2017ರ ಜುಲೈನಲ್ಲಿ ನಿಮಿಷಾ ಪ್ರಿಯಾಳನ್ನು ಬಂಧಿಲಾಗಿತ್ತು. 2020ರಲ್ಲಿ ಯೆಮನ್ ನ್ಯಾಯಾಲಯ ಆಕೆಗೆ ಗಲ್ಲು ಶಿಕ್ಷೆ ವಿಧಿಸಿತ್ತು. 2023ರ ನವೆಂಬರ್ ನಲ್ಲಿ ಸುಪ್ರೀಂ ಜ್ಯುಡೀಶಿಯಲ್ ಕೌನ್ಸಿಲ್ ನಿಮಿಷಾ ಪ್ರಿಯಾ ಅವರ ಮನವಿಯನ್ನು ತಿರಸ್ಕರಿಸಿತ್ತು. ಪ್ರಸ್ತುತ ಪ್ರಿಯಾ, ಹೌದಿ ಬಂಡುಕೋರರ ನಿಯಂತ್ರಣದಲ್ಲಿರುವ ಸನಾ ಜೈಲಿನಲ್ಲಿದ್ದಾರೆ.