ಬಂಟ್ವಾಳ: ಯುವತಿಯೊಬ್ಬಳಿಗೆ ಚೂರಿಯಿಂದ ಇರಿದು ಬಳಿಕ ವ್ಯಕ್ತಿಯೋರ್ವ ಆಕೆಯ ಮನೆಯೊಳಗೆ ಹೋಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾರಿಪಳ್ಳ ಸಮೀಪದ ಸುಜೀರು ಎಂಬಲ್ಲಿ ಸಂಭವಿಸಿದೆ.
ಕೊಡ್ಮಾಣ್ ನಿವಾಸಿ ಸುಧೀರ್ (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ.
ಸುಜೀರುವಿನಲ್ಲಿರುವ ಯುವತಿ ಇದ್ದ ಬಾಡಿಗೆ ಮನೆಗೆ ನುಗ್ಗಿದ ಆರೋಪಿ ಸುಧೀರ್ ಯುವತಿಗೆ ಗಾಯಗೊಳಿಸಿ ಒಳಗಡೆ ಹೋಗಿ ನೇಣು ಬಿಗಿದ್ದು ಆತ್ಮಹತ್ಯೆ ಮಾಡಿದ್ದಾನೆ.
ಚೂರಿ ಇರಿತಕ್ಕೊಳಗಾದ ಯುವತಿ ಮೂರ್ಚೆ ತಪ್ಪಿ ಬಿದ್ದಿದ್ದಳು. ಈಕೆಯ ಮನೆಯವರು ಬಂದು ಈಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಮನೆಯವರು ಮನೆಯ ಒಳಗಡೆ ಬಂದು ನೋಡಿದಾಗ ಸುಧೀರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ವನ್ ಸೈಡ್ ಲವ್ ಇದಾಗಿದ್ದು, ಯುವತಿ ಈತನ ಪ್ರೀತಿ ನಿರಾಕರಿಸಿದ್ದಕ್ಕಾಗಿ ಯುವಕ ಈ ಕೃತ್ಯ ನಡೆಸಿರಬಹುದೆಂದು ಶಂಕಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.