ಇಬ್ಬರು ಮಕ್ಕಳ ಜೊತೆ ನಾಪತ್ತೆಯಾಗಿದ್ದ ಮಹಿಳೆ ಈ ಬಾರಿ ಒಂದು ಮಗುವಿನ ಜೊತೆ ನಿಗೂಢ ನಾಪತ್ತೆ

ಬದಿಯಡ್ಕ: ಕಳೆದ ಬಾರಿ ಇಬ್ಬರು ಮಕ್ಕಳ ಜೊತೆ ನಾಪತ್ತೆಯಾಗಿ ಪತ್ತೆಯಾಗಿದ್ದ ಮಹಿಳೆ ಈ ಬಾರಿ ಒಂದು ಮಗುವಿನ ಜೊತೆ ನಿಗೂಢವಾಗಿ ನಾಪತ್ತೆಯಾದ ಘಟನೆ ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಶೇಣಿ ಎಂಬಲ್ಲಿ ಬೆಳಕಿಗೆ ಬಂದಿದೆ.

ಶೇಣಿ ಬಲ್ತಿಕಲ್ಲು ನಿವಾಸಿ ಚಿತ್ರಕಲಾ(37) ನಾಪತ್ತೆಯಾದ ಮಹಿಳೆ. ಹೆಂಡತಿ ಚಿತ್ರಕಲಾ ಜುಲೈ 1 ರಂದು ತನ್ನ ಮೂರುವರೆ ವರ್ಷದ ಮಗುವಿನ ಜತೆ ನಾಪತ್ತೆಯಾಗಿ ಪತಿ ಗಂಗಾಧರ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.

ಕಳೆದ ಜೂನ್ 1 ರಂದು ಈಕೆ ಇಬ್ಬರು ಮಕ್ಕಳ ಜತೆ ನಾಪತ್ತೆಯಾಗಿದ್ದಳು. ಇವಳನ್ನು ಬದಿಯಡ್ಕ ಪೊಲೀಸರು ಪತ್ತೆ ಹಚ್ಚಿ ನ್ಯಾಯಾಲಯದಲ್ಲಿ ಹಾಜರಿಪಡಿಸಿದ್ದರು. ಇದೀಗ ಮತ್ತೆ ನಾಪತ್ತೆಯಾಗಿದ್ದು, ಪ್ರಕರಣ ಕುತೂಹಲ ಮೂಡಿಸಿದೆ. ಬಡಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!