ಮೂಡುಬಿದಿರೆ: ಹಿಂದು ಸಂಘಟನೆಯ ಮುಖಂಡ ಸಮಿತ್ ರಾಜ್ ಧರೆಗುಡ್ಡೆ ಎಂಬಾತನನ್ನು ಅಪಘಾತ ಪ್ರಕರಣದಲ್ಲಿ ಕಾನೂನುಬಾಹಿರವಾಗಿ ಪರಿಹಾರ ಕೊಡಿಸಿದ್ದ ಪ್ರಕರಣಕ್ಕೆ ಸಂಬOಧಿಸಿ ಮೂಡುಬಿದಿರೆ ಪೊಲೀಸರು ಕಳೆದ ಜುಲಾಯಿ 1ರಂದು ವಶಕ್ಕೆ ತೆಗೆದುಕೊಂಡು ಆತನ ಮೊಬೈಲಿನ ದತ್ತಾಂಶಗಳನ್ನು ಪರಿಶೀಲಿಸಿದಾಗ ಅಶ್ಲೀಲ ವಿಡಿಯೋ ಪತ್ತೆಯಾಗಿರುವ ಹಿನ್ನಲ್ಲೆಯಲ್ಲಿ ಆತನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿರುತ್ತದೆ.
ಈ ಕುರಿತು ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿರುತ್ತದೆ.
2025 ಜುಲಾಯಿ 1ರಂದು ಬೆಳಿಗ್ಗೆ 11.30ರಿಂದ ರಾತ್ರಿ 8.00 ಗಂಟಗೆಯ ಅವಧಿಯಲ್ಲಿ ಆರೋಪಿ ಸಮಿತ್ ರಾಜ್ ಧರೆಗುಡ್ಡೆಯ ಸಿಕ್ಕ ದತ್ತಾಂಶಗಳನ್ನು ಪರಿಶೀಲಿಸಿದಾಗ ಆತನ ಮೊಬೈಲ್‌ನಲ್ಲಿ ಲೈಂಗಿಕ ಪ್ರಚೋದನೆಯುಳ್ಳ ವಿಡಿಯೋಗಳ ತುಣುಕುಗಳು ಪತ್ತೆಯಾಗಿದ್ದವು.
ಆರೋಪಿಯು ಮುಂದಕ್ಕೆ ಆ ವಿಡಿಯೋ ತುಣುಕುಗಳನ್ನು ಪ್ರಸಾರ ಮಾಡುವ ಅಥವಾ ಇನ್ಯಾರಿಗೋ ಕಳುಹಿಸಿ ಸಾಮಾಜದ ಸ್ವಾಸ್ಥ್ಯ ಹಾಳು ಮಾಡುವಂತಹ ಸಾಧ್ಯತೆಗಳು ಇದ್ದುದರಿಂದ ಪೊಲೀಸರು ಕ್ರಮ ಕೈಗೊಂಡು ಆರೋಪಿ ಸಮಿತ್ ರಾಜ್ ಧರೆಗುಡ್ಡೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.