ಟೀಚರ್‌ ಅವಮಾನದಿಂದ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ

ಮಹಾರಾಷ್ಟ್ರ: ಟೀಚರ್‌ ಅವಮಾನ ಮಾಡಿದರೆಂದು 10ನೇ ತರಗತಿಯ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಪ್ರಾಣ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ಸಂಭವಿಸಿದೆ. ಮಹಾರಾಷ್ಟ್ರದ ಅಮರಾವತಿಯಲ್ಲಿರುವ ಜೈ ಬಜರಂಗ್ ವಿದ್ಯಾಲಯದಲ್ಲಿ 10ನೇ ತರಗತಿ ಓದುತ್ತಿದ್ದ ವಿವೇಕ್ ಮಹದೇವ್ ರಾವುತ್ (15) ಪ್ರಾಣ ಕಳೆದುಕೊಂಡ ವಿದ್ಯಾರ್ಥಿ.

ತರಗತಿಯಲ್ಲಿ ವಿವೇಕ್‌ಗೆ ಸೂರ್ಯವಂಶಿ ಎನ್ನುವ ಶಿಕ್ಷಕ ಪಠ್ಯದ ಸಂಬಂಧ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಟೀಚರ್‌ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಆಗದೆ ಇದ್ದಾಗ, ಸೂರ್ಯವಂಶಿ ಅವರು ವಿವೇಕ್‌ಗೆ ಜೋರು ಮಾಡಿದ್ದಾರೆ. “ನಿನ್ನ ಅಪ್ಪ – ಅಮ್ಮನ ಬಳಿ ನೀನು ಕಲಿಯುವುದಿಲ್ಲ ಅಂಥ ದೂರು ಕೊಡುತ್ತೇನೆ” ಎಂದಿದ್ದಾರೆ.

ಇದನ್ನು ಕೇಳಿದ ಸಹ ವಿದ್ಯಾರ್ಥಿಗಳು ವಿವೇಕ್‌ನನ್ನು ನೋಡಿ ತಮಾಷೆ ಮಾಡಿದ್ದಾರೆ. ಇದು ವಿವೇಕ್‌ಗೆ ಅವಮಾನದ ರೀತಿಯಾಗಿದೆ. ಶಿಕ್ಷಕರು ಬೈಯ್ದ ಪರಿಣಾಮ ಮನನೊಂದಿದ್ದ ವಿವೇಕ್‌ ಮನೆಗೆ ಬಂದು ನೇಣು ಬಿಗಿದುಕೊಂಡಿದ್ದಾನೆ.

ಸಾಯುವ ಮುನ್ನ ವಿವೇಕ್‌ ಪತ್ರವೊಂದನ್ನು ಬರೆದಿದ್ದು, ಇದರಲ್ಲಿ ಸೂರ್ಯವಂಶಿ ಅವರ ಹೆಸರು ಬರೆದಿದ್ದಾನೆ.”ನಾನು ನೇಣು ಬಿಗಿದುಕೊಳ್ಳುತ್ತಿದ್ದೇನೆ… ಸೂರ್ಯವಂಶಿ ಟೀಚರ್ ನನಗೆ ಬೈಯ್ದಿದ್ದಾರೆ. ನನ್ನ ಹೆತ್ತವರ ಬಗ್ಗೆ ಮಾತನಾಡಿದ್ದಾರೆ. ನಾನು ನೇಣು ಹಾಕಿಕೊಳ್ಳುತ್ತಿದ್ದೇನೆ” ಎಂದು ಪತ್ರದಲ್ಲಿ ಬರೆದಿದ್ದಾನೆ. ವಿದ್ಯಾರ್ಥಿಯ ಸಾವಿನ ಬಳಿಕ ನೆರೆಹೊರೆಯವರು ಶಿಕ್ಷಕನನ್ನು ಥಳಿಸಿದ್ದಾರೆಂದು ವರದಿಯಾಗಿದೆ, ಅವರು ಈಗ ಆಸ್ಪತ್ರೆಯಲ್ಲಿದ್ದಾರೆ.

ಶಿಕ್ಷಕನ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!