ಪುತ್ತೂರು: ವೇಶ್ಯಾವಾಟಿಕೆ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ ಘಟನೆ ಕಸ್ಬಾ ಗ್ರಾಮದ ಸಾಮೆತ್ತಡ್ಕ ಎಂಬಲ್ಲಿ ನಡೆದಿದೆ.

ಸಾಮೆತ್ತಡ್ಕ ಎಂಬಲ್ಲಿ ಪ್ರಕರಣದ ಆರೋಪಿ ವಿಲ್ಪೇಡ್ ಎಂಬಾತನ ವಾಸ್ತವ್ಯದ ಮನೆಯ ಸಮೀಪದ ಕಟ್ಟಡದಲ್ಲಿ, ಆತ ಅಕ್ರಮವಾಗಿ ವೈಶ್ಯವಾಟಿಕೆ ಕೃತ್ಯ ನಡೆಸುತ್ತಿರುವ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಜು.1ರಂದು, ಪೊಲೀಸ್ ನಿರೀಕ್ಷಕರು ಹಾಗೂ ದ.ಕ ಮಹಿಳಾ ಪೊಲೀಸ್ ಪೊಲೀಸರು ಧಾಳಿ ನಡೆಸಿ ಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತಂತೆ ಮಹಿಳಾ ಪೊಲೀಸ್ ಠಾಣೆ ಅ.ಕ್ರ 51/2025 ಕಲಂ: 143(2),BNS 2023 & 3,4,5(3) ITP ACT 1956 ರಂತೆ ಪ್ರಕರಣ ದಾಖಲಿಸಿ ನಿಖೆ ನಡೆಸಲಾಗುತ್ತಿದೆ.
ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ದಿನಾಂಕ ಜು.15ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝