ಬೆಳಗಾವಿ: ಆಟೋ ರಿಕ್ಷಾದಲ್ಲೇ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ರಾಘವೇಂದ್ರ ಜಾಧವ್(28), ರಂಜಿತಾ ಚೋಬರಿ(26) ಮೃತರು.
ಯುವತಿಗೆ ಬೇರೆ ಯುವಕನ ಜತೆ ಮದುವೆ ನಿಶ್ಚಯ ಮಾಡಿದ ಹಿನ್ನೆಲೆಯಲ್ಲಿ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಾನು ಓಡಿಸುತ್ತಿದ್ದ ಆಟೋದಲ್ಲೇ ಪ್ರಿಯತಮೆ ಜತೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇವರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹದಿನೈದು ದಿನದ ಹಿಂದೆ ರಂಜಿತಾಗೆ ನಿಶ್ಚಿತಾರ್ಥವಾಗಿತ್ತು. ಮನೆಯಲ್ಲಿ ಬೇರೊಬ್ಬ ಯುವಕನೊಟ್ಟಿಗೆ ಮದುವೆ ನಿಶ್ಚಿಯ ಮಾಡಿದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಆಟೋದಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿರ್ಜನ ಪ್ರದೇಶಕ್ಕೆ ತೆರಳಿ ಆಟೋದಲ್ಲೇ ನೇಣು ಬಿಗಿದುಕೊಂಡು ಜೋಡಿ ಆತ್ಮಹತ್ಯೆಗೆ ಶರಣಾಗಿದೆ. ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.