ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಆಯ್ಕೆ

ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಇದರ 2025-27 ನೇ ಸಾಲಿನ ನಿರ್ದೇಶಕರ ಸಭೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಆಯ್ಕೆಗೊಂಡಿದ್ದಾರೆ.

 

 

ಉಪಾಧ್ಯಕ್ಷರಾಗಿ ಪ್ರವೀಣ್ ಪಿ ಶೆಟ್ಟಿ , ಪ್ರಧಾನ ಕಾರ್ಯದರ್ಶಿಯಾಗಿ ಲೀಲಾಧರ್ ಶೆಟ್ಟಿ ಕಟ್ಲ , ಕೋಶಾಧಿಕಾರಿಯಾಗಿ ರತ್ನಾಕರ ಶೆಟ್ಟಿ ಸುರತ್ಕಲ್, ಸಹಕಾರ್ಯದರ್ಶಿಯಾಗಿ ಮೀರಾ ವಾಣಿ ಶೆಟ್ಟಿ ಕಾಟಿಪಳ್ಳ, ಸಂಘಟನಾ ಕಾರ್ಯದರ್ಶಿಯಾಗಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದೇವೇಂದ್ರ ಕೆ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ಪುಷ್ಪರಾಜ್ ಶೆಟ್ಟಿ ಮದ್ಯ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀಕಾಂತ್ ಶೆಟ್ಟಿ ಕಾಟಿಪಳ್ಳ, ಸುಜೀರ್ ಶೆಟ್ಟಿ ಸೂರಿಂಜೆ, ಗಿರೀಶ್ ಎಂ ಶೆಟ್ಟಿ ಪೆರ್ಮುದೆ, ಪ್ರಮೋದ್ ಶೆಟ್ಟಿ ಹೊಸಬೆಟ್ಟು, ಸುಕೇಶ್ ಶೆಟ್ಟಿ ಚೇಳಾರ್, ರಾಮಚಂದ್ರ ಶೆಟ್ಟಿ ಕುಳಾಯಿ, ದಾಮೋದರ ಶೆಟ್ಟಿ ತೋಕೂರು, ಪದ್ಮನಾಭ ಶೆಟ್ಟಿ ಕುತ್ತೆತ್ತೂರು, ಸವಿತಾ ಭವಾನಿ ಶಂಕರ್ ಶೆಟ್ಟಿ ಬಾಳ, ಜ್ಯೋತಿ ಜೆ ಶೆಟ್ಟಿ ಸುರತ್ಕಲ್ ಆಯ್ಕೆಯಾದರು.

ಚುನಾವಣಾಧಿಕಾರಿಗಳಾಗಿ ಉಲ್ಲಾಸ್ ಶೆಟ್ಟಿ ಪೆರ್ಮುದೆ, ದಿವಾಕರ ಸಾಮಾನಿ ಚೇಳಾರ್ ಗುತ್ತು ಕರ್ತವ್ಯ ನಿರ್ವಹಿಸಿದ್ದರು. ಸಂಘದ ಅಧ್ಯಕ್ಷರಾದ ಲೋಕಯ್ಯ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಸುಧಾಕರ ಎಸ್ ಪೂಂಜ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj

error: Content is protected !!