ವಿಷವಿಟ್ಟು 5 ಹುಲಿಗಳನ್ನು ಕೊಂದಿದ್ದ ಮಾದುರಾಜ ಪೊಲೀಸ್ ಬಲೆಗೆ!

ಚಾಮರಾಜನಗರ: ಜಿಲ್ಲೆಯಲ್ಲಿ ಒಂದೇ ದಿನ ಐದು ಹುಲಿಗಳ ಮೃತದೇಹ ಪತ್ತೆಯಾಗಿದ್ದ ಘಟನೆ ಮೊನ್ನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿತ್ತು.

ಪ್ರಕರಣದ ಬೆನ್ನುಬಿದ್ದ ಅರಣ್ಯ ಮತ್ತು ಪೊಲೀಸ್ ಇಲಾಖೆ ತಂಡ ಆರೋಪಿ ಮಾದುರಾಜ ಎಂಬವನನ್ನು ಬಂಧಿಸಿದ್ದು ಆತ ತನ್ನ ಹಸುಗಳನ್ನು ಕೊಂದ ಕಾರಣಕ್ಕೆ ತಾನೇ ವಿಷವಿಟ್ಟು ಹುಲಿಗಳನ್ನು ಕೊಂದಿರುವುದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗುತ್ತಿದೆ.

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಹೂಗ್ಯಂ ವಲಯದ ಗಾಜನೂರು ಬಳಿ ಗುರುವಾರ ಐದು ಹುಲಿಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ʼರಾಜಕಾರಣಿಗಳ ಹುನ್ನಾರದಿಂದಾಗಿ ಮಲೆ ಮಹದೇಶ್ವರ ವನ್ಯ ಜೀವಿಧಾಮ ಹುಲಿ ಸಂರಕ್ಷಿತ ಪ್ರದೇಶವಾಗದೇ ಇರುವುದು ಹುಲಿಗಳ ಸಾವಿಗೆ ಕಾರಣವಾಗಿದೆʼ ಎಂದು ಪರಿಸರ ಪ್ರೇಮಿಗಳು ಮತ್ತು ಪರಿಸರ ತಜ್ಞರು ಆರೋಪಿಸಿದ್ದರು.

ಆರೋಪಿ ಮಾದುರಾಜ್ ಹಸಗಳನ್ನು ಸಾಕುತ್ತಿದ್ದು ಆತ ಗೋಮಾಂಸದಲ್ಲಿ ವಿಷಬೆರೆಸಿ ಕಾಡಿನಲ್ಲಿ ಇಟ್ಟು ಹುಲಿಗಳನ್ನು ಕೊಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!