ಹಣ ಉಳಿಸಲು ಎಲ್ಲಾ ಯುಪಿಐ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡುವಂತೆ ಸಾನಿಯಾ ಮಿರ್ಜಾ ಅವರ ಸಹೋದರಿ ಅನಮ್ ಮಿರ್ಜಾ ಸಲಹೆ ನೀಡಿದ್ದಷ್ಟೇ ಅಲ್ಲದೆ ತಾನೂ ರು ಕೂಡ ಈ ಎಲ್ಲಾ ಆ್ಯಪ್‌ಗಳನ್ನು ಡಿಲಿಟ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ, ಅವರು ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇನೆ ಮತ್ತು ಇಂತಹ ಆ್ಯಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿದ್ದೇನೆ, ಹಣ ಉಳಿಸಲು ಇದೊಂದು ಸಣ್ಣ ಉಪಾಯ ಎಂದಿದ್ದಾರೆ.
ಈಗ ನನ್ನ ಬಳಿ ತ್ವರಿತ ಪಾವತಿಯ ಯಾವ ಅಪ್ಲಿಕೇಷನ್‌ಗಳು ಕೂಡ ಇಲ್ಲ. ಈ ವರ್ಷ, ನಾನು ನನ್ನ ಯುಪಿಐ ಖಾತೆಗಳನ್ನು ತೆಗೆದು ಹಾಕಿದ್ದೇನೆ. ಈ ವರ್ಷ ನಾನು ಮಾಡಿದ ಉತ್ತಮ ನಿರ್ಧಾರ ಇದು ಎಂದು ಹೇಳಿಕೊಂಡಿದ್ದಾರೆ.
ಇದು ಖರ್ಚು ಮಾಡುವ ಬಗ್ಗೆ ಹೆಚ್ಚು ಜಾಗರೂಕರಾಗಲು ನನಗೆ ಸಹಾಯ ಮಾಡಿತು. ಮೊದಲಿಗೆ ಈ ಅಪ್ಲಿಕೇಷನ್ ಇಲ್ಲದೇ ವ್ಯವಹರಿಸುವುದು ಕಷ್ಟವಾಗಿತ್ತು, ಆದರೆ ಈಗ ಎಲ್ಲಾ ಸರಿ ಹೋಗಿದೆ. ನಾನೀಗ ನಗದು ವ್ಯವಹಾರವನ್ನೇ ಮಾಡುತ್ತಿದ್ದೇನೆ ಎಂದಿದ್ದಾರೆ.
ಅನಮ್ ಮಿರ್ಜಾ ತಮ್ಮ ಇನ್‌ಸ್ಟಾಗ್ರಾಮ್ ಪೇಜಿನಲ್ಲಿ ‘ಲಿಟಲ್ ಚೇಂಜಸ್, ಬಿಗ್ ಇಂಪ್ಯಾಕ್ಟ್’ ಸರಣಿಯ ಭಾಗವಾಗಿ ಈ ಸಲಹೆಯನ್ನು ಹಂಚಿಕೊಂಡಿದ್ದಾರೆ. ತ್ವರಿತ ಪಾವತಿಗಳನ್ನು ತಪ್ಪಿಸುವುದರಿಂದ ತನ್ನ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದರ ಬಗ್ಗೆ ಹೆಚ್ಚಿನ ಅರಿವು ಮೂಡಿತು ಮತ್ತು ಹೆಚ್ಚಿನದನ್ನು ಉಳಿಸಲು ಸಹಾಯವಾಯಿತು ಎಂದು ಅನಮ್ ಹೇಳಿದರು.
ನೆಟ್ಟಿಗರು ಏನಂದ್ರು?
ಅನಮ್ ಮಿರ್ಜಾ ಈ ಸಲಹೆಗೆ ಸಾಮಾಜಿಕ ಮಾಧ್ಯಮದಲ್ಲಿ ತರಹೇವಾರಿ ಪ್ರತಿಕ್ರಿಯೆಗಳು ಬಂದಿವೆ. “ನೀವು ಈಗಾಗಲೇ ಶ್ರೀಮಂತರಾಗಿರುವುದರಿಂದ ಇದು ನಿಮಗೆ ಸರಿಹೊಂದುತ್ತದೆ. ನಮ್ಮಂತಹ ಮಧ್ಯಮ ವರ್ಗದ ಜನರು ಮಾತ್ರ ಯುಪಿಐ ಹೊಂದಿರುವುದು ಎಷ್ಟು ಅನುಕೂಲಕರವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಲ್ಲರು. ಅನಗತ್ಯ ಖರ್ಚುಗಳನ್ನು ಮಾಡುವ ಮೊದಲು ಜನರು ಖಂಡಿತವಾಗಿಯೂ ಯೋಚಿಸಬೇಕು, ಆದರೆ ಅದಕ್ಕಾಗಿ ಇಂತಹ ಅಪ್ಲಿಕೇಷನ್‌ಗಳನ್ನು ಡಿಲಿಟ್ ಮಾಡುವ ಅಗತ್ಯವಿಲ್ಲ” ಎಂದು ಒಬ್ಬ ನೆಟ್ಟಿಗ ಪ್ರತಿಕ್ರಿಯಿಸಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝