ಪಾವಂಜೆ: ಭೀಕರ ಅಪಘಾತಕ್ಕೆ ಯುವತಿ ದಾರುಣ ಮೃತ್ಯು!

ಹಳೆಯಂಗಡಿ: ಇಲ್ಲಿಗೆ ಸಮೀಪದ ಪಾವಂಜೆ ಬಳಿ ಗುರುವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಸಾಫ್ಟ್ ವೇರ್ ಉದ್ಯೋಗಿ ಯುವತಿ ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು ಬಂಗ್ರಕುಳೂರು ನಿವಾಸಿ ಶ್ರುತಿ ಆಚಾರ್ಯ(೨೭) ಎಂದು ಗುರುತಿಸಲಾಗಿದೆ. ತಂದೆ ಗೋಪಾಲ್ ಆಚಾರ್ಯ (೫೩) ಮತ್ತು ಕೈರುನ್ನಿಸಾ (೫೨) ಎಂಬವರು ಗಂಭೀರ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೋರು ಮಳೆ ಬರುತ್ತಿದ್ದ ವೇಳೆ ಶ್ರುತಿ ರೈನ್‌ಕೋಟ್ ಧರಿಸಲು ಸ್ಕೂಟರ್ ನಿಲ್ಲಿಸಿದ ವೇಳೆ ಈ ಅಪಘಾತ ಸಂಭವಿಸಿದೆ. ಉಡುಪಿಯಿಂದ ಮಂಗಳೂರು ಕಡೆಗೆ ವೇಗವಾಗಿ ಬರುತ್ತಿದ್ದ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಶ್ರುತಿ ಮತ್ತು ಆಕೆಯ ಸ್ಕೂಟರ್ ಹಲವಾರು ಮೀಟರ್‌ಗಳಷ್ಟು ದೂರ ಹಾರಿ ಬಿದ್ದಿತ್ತು. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾದರೂ ಆಕೆ ಕೊನೆಯುಸಿರೆಳೆದರು.
ಚೆನ್ನೈನಲ್ಲಿ ನೆಲೆಸಿರುವ ಸಾಫ್ಟ್‌ವೇರ್ ಎಂಜಿನಿಯರ್ ಶ್ರುತಿ, ಸುಮಾರು ೧೫ ದಿನಗಳ ಹಿಂದೆ ನಿಧನರಾದ ತನ್ನ ಸಹೋದರನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಇತ್ತೀಚೆಗೆ ಮನೆಗೆ ಮರಳಿದ್ದರು ಎನ್ನಲಾಗಿದೆ.

error: Content is protected !!