ಬಿಜೆಪಿಯ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಣ್ಣಾ ಮಲೈ?

ನವದೆಹಲಿ: ನಿವೃತ್ತ ಐಪಿಎಸ್, ತಮಿಳುನಾಡು ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾ ಮಲೈ ಅವರನ್ನು ಬಿಜೆಪಿಯ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಿಯುಕ್ತಿ ಮಾಡಲಾಗಿದೆ ಎಂಬ ಸುದ್ದಿ ವೈರಲ್ ಆಗಿದೆ.

 

ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ, ಪ್ರಭಾವಿ ಬಿಜೆಪಿ ಮುಖಂಡ ಅಮಿತ್‌ ಶಾ ಅವರು ಅಣ್ಣಾ ಮಲೈ ಅವರಿಗೆ ಪಕ್ಷದಲ್ಲಿ ದೊಡ್ಡದೊಂದು ಹುದ್ದೆ ಸಿಗಲಿದೆ ತಮಿಳುನಾಡಿನ ವೆಬ್‌ಸೈಟ್ ಒಂದಕ್ಕೆ ಮಾಹಿತಿ ನೀಡಿದ್ದ್ದರು.

ರಾಜ್ಯಾಧ್ಯಕ್ಷ ಹುದ್ದೆಯಿಂದ ಅಣ್ಣಾಮಲೈ ಅವರನ್ನು ಪದಚ್ಯುತಗೊಳಿಸಿದ್ದು ಯಾಕೆ ಎಂಬ ಪತ್ರಕರ್ತನ  ಪ್ರಶ್ನೆಗೆ ಅಮಿತ್ ಶಾ ಅವರು ಅಣ್ಣಾಮಲೈ ಅವರಿಗೆ ರಾಷ್ಟ್ರೀಯ ಸ್ಥಾನಮಾನ ಸಿಗಲಿದೆ ಎಂದು ಮಾರ್ಮಿಕವಾಗಿ ನುಡಿದಿದ್ದರು. ಇದೇ ಸುದ್ದಿ ವೈರಲ್ ಆಗಿ ಬಿಜೆಪಿಯ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಯಾಗಿ ಅಣ್ಣಾ ಮಲೈ ನಿಯುಕ್ತರಾಗಿದ್ದಾರೆ ಎಂಬ ವದಂತಿ ಹರಡಲು ಕಾರಣವಾಗಿದೆ.

ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಪ್ರಾಬಲ್ಯಗೊಳಿಸಿ ಅತೀ ಹೆಚ್ಚು ಸ್ಥಾನಗಳನ್ನು ಗಳಿಸಿಕೊಡುವ ಸಲುವಾಗಿ ದಕ್ಷಿಣ ಭಾರತದ ತಮಿಳುನಾಡಿನ ವ್ಯಕ್ತಿಗೆ ಬಿಜೆಪಿಯಲ್ಲಿ ದೊಡ್ಡ ಹುದ್ದೆಯೊಂದು ದಕ್ಕಬೇಕು ಎಂಬುವುದು ಇಲ್ಲಿನ ಬಿಜೆಪಿಗರ ನಿರೀಕ್ಷೆಯಾಗಿತ್ತು. ಇದಕ್ಕೆ ಪೂರಕ ಎಂಬಂತೆ ಅಮಿತ್ ಶಾ ಹಾಗೂ ಅಣ್ಣಾಮಲೈ‌‌ ಸೌಹಾರ್ದ‌ಭೇಟಿ ಈ ಎಲ್ಲ ವದಂತಿಗಳಿಗೆ ಕಾರಣ ಆಗಿದೆ ಎನ್ನಲಾಗಿದೆ.

 ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!