ಬೈಂದೂರು : ದೇವಸ್ಥಾನದ ಗೋಪುರಕ್ಕೆ ಅಳವಡಿಸುವ ಸುಮಾರು 3 ಕೆ.ಜಿ. ತೂಕದ ತಾಮ್ರದ ಕಲಶವೊಂದು ಪಡುವರಿ ಗ್ರಾಮದ ಸೋಮೇಶ್ವರ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಸಮುದ್ರ ಬದಿಯ ನೀರಿನಿಂದ ಮುಳುಗಡೆಯಾಗಿರುವ ದೇವಸ್ಥಾನದ ಕಲಶವಾಗಿರಬಹುದೆಂದು ಶಂಕಿಸಲಾಗಿದೆ. ಅದು ಸಮುದ್ರದ ನೀರಲ್ಲಿ ಮುಳುಗದೆ ತೀರಕ್ಕೆ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.
ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸಪೆಕ್ಟರ್ ವಸಂತ ರಾಮ ಆಚಾರ್, ಉಪನಿರೀಕ್ಷಕ ಸುಬ್ರಹ್ಮಣ್ಯ ಎಚ್. ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪತ್ತೆಯಾದ ತಾಮ್ರದ ಕಲಶವನ್ನು ತಮ್ಮ ಸುಪರ್ದಿತಲ್ಲಿ ಸುರಕ್ಷಿತವಾಗಿರಿಸಿದ್ದಾರೆ. ಕಳಶದ ವಾಸುದಾರರು ಯಾರಾದರೂ ಇದ್ದರೆ ಇದ್ದಲ್ಲಿ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು ಪೊಲೀಸರು ತಿಳಿಸಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝