ಬೆಂಗಳೂರು: ಆರೋಗ್ಯದ ಮಹತ್ವವನ್ನು ತಿಳಿಸಲು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮೆಡಿಕವರ್ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ಶಿಬಿರನ್ನು ಬೆಂಗಳೂರಿನ ಕೆ.ಆರ್.ಪುರಂ – ಯುನೈಟೆಡ್ ಎಲಿಸಿಯಂ ಅಪಾರ್ಟ್‌ಮೆಂಟ್‌ನಲ್ಲಿ ಆಯೋಜಿಸಲಾಯಿತು.
ಅಪಾರ್ಟ್‌ಮೆಂಟ್ ಅಧ್ಯಕ್ಷರಾದ ಕೆ. ವಿ. ರೆಡ್ಡಿಅವರ ನೇತೃತ್ವದಲ್ಲಿ ಆಯೋಜಿಸಲಾದ ಈ ಶಿಬಿರದಲ್ಲಿ ಹೆಚ್ಚು ಸದಸ್ಯರು ಭಾಗವಹಿಸಿ ಉಪಯೋಗ ಪಡೆದರು. ಈ ಶಿಬಿರದಲ್ಲಿ ಮೆಡಿಕವರ್ ಆಸ್ಪತ್ರೆಯ ಡಾ. ಅಖಿಲ್ ಗೌಡ, ಜನರಲ್ ಫಿಸಿಶಿಯನ್ ಹಾಜರಿದ್ದು, ನಿವಾಸಿಗಳಿಗೆ ತಜ್ಞ ಸಲಹೆ ಮತ್ತು ತಪಾಸಣೆ ನೀಡಿದರು. ಈ ಶಿಬಿರವು ಮೆಡಿಕವರ್ ಆಸ್ಪತ್ರೆಯ ಸಾರ್ವಜನಿಕ ಆರೈಕೆ ಕಾರ್ಯಕ್ರಮದ ಭಾಗವಾಗಿದ್ದು, ನಗರ ಜನರಲ್ಲಿ ಆರೋಗ್ಯದ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝