ಎಮ್.ಸಿ.ಸಿ. ಬ್ಯಾಂಕಿನಿಂದ ನೋಟ್ ಪುಸ್ತಕ, ಕೊಡೆ, ಸ್ಕೂಲ್ ಬ್ಯಾಗ್ ವಿತರಣೆ

ಮಂಗಳೂರು:  ಎಂಸಿಸಿ ಬ್ಯಾಂಕ್ ವತಿಯಿಂದ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಮತ್ತು ನಿರ್ದೇಶಕರ ಮಂಡಳಿಯ ನೇತೃತ್ವದಲ್ಲಿ ಜೂನ್ ತಿಂಗಳಿನಾದ್ಯಂತ ಮಂಗಳೂರು, ಉಡುಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ್ಯಂತ ವಿವಿಧ ಶಾಲೆಗಳು, ಅನಾಥಾಶ್ರಮಗಳು ಮತ್ತು ಸಂಸ್ಥೆಗಳಿಗೆ ನೋಟ್ ಪುಸ್ತಕ, ಕೊಡೆ ಮತು ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸಲಾಯಿತು.

ಪಡುಕೋಣೆಯ ಸೈಂಟ್ ಆಂಟನಿ ಪ್ರಾಥಮಿಕ ಶಾಲೆ, ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ, ಕುಂದಾಪುರದ ಸೈಂಟ್ ಮೇರಿ ಶಾಲೆ, ಕುಂದಾಪುರದ ಸೈಂಟ್ ಜೋಸೆಫ್ ಪ್ರಾಥಮಿಕ ಮತ್ತು ಪ್ರೌಢಶಾಲೆ, ಬ್ರಹ್ಮಾವರದ ನಿರ್ಮಲಾ ಪ್ರೌಢಶಾಲೆ ಮತ್ತು ಕೊಸ್ಮೊಪೊಲಿಟನ್ ಹಿರಿಯ ಪ್ರಾಥಮಿಕ ಶಾಲೆ, ಮಂಗಳೂರಿನ ಕೂಳೂರು ಪ್ರೌಢಶಾಲೆ, ಬಿಜೈಯ ಸೈಂಟ್ ಅಂಜೆಲಾ ಹೋಂ, ಡಿ ಮರ್ಸಿಡ್ ಅನಾಥಾಶ್ರಮ, ಪಾನೀರ್, ಪಾಲಡ್ಕದ ಸೈಂಟ್ ಇಗ್ನೇಷಿಯಸ್ ಲೊಯೊಲಾ ಶಾಲೆ, ಜೆಪ್ಪುವಿನ ಸೈಂಟ್ ರೀಟಾ ಹಿರಿಯ ಪ್ರಾಥಮಿಕ ಶಾಲೆ, ಉರ್ವಾದದ ಲೇಡಿಹಿಲ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪುತ್ತೂರಿನ ಮಾಯ್ ದೆ ದೆವೂಸ್ ಹಿರಿಯ ಪ್ರಾಥಮಿಕ ಶಾಲೆಯ ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಶಾಲಾ ಬ್ಯಾಗ್ ಮತ್ತು ಕೊಡೆಗಳನ್ನು ವಿತರಣೆ ಮಾಡಲಾಯಿತು. ಜೆಪ್ಪುವಿನ ಸಂತ ಅಂತೋನಿ ಆಶ್ರಮದ ನಿವಾಸಿಗಳಿಗೆ ಕೊಡೆಗಳನ್ನು ವಿತರಿಸಲಾಯಿತು.

ಸಂಸ್ಥೆಗಳ ಮುಖ್ಯಸ್ಥರು ಬ್ಯಾಂಕಿನ ಬ್ಯಾಂಕಿನ ಅಧ್ಯಕ್ಷರು ಮತ್ತು ನಿರ್ದೇಶಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಎಮ್.ಸಿ.ಸಿ. ಬ್ಯಾಂಕ್ ವತಿಯಿಂದ ಇದುವರೆಗೆ ಸುಮಾರು 10 ಲಕ್ಷಕ್ಕಿಂತ ಹೆಚ್ಚಿನ ವೆಚ್ಚದ ಕೊಡೆಗಳು, ಶಾಲಾ ಬ್ಯಾಗ್, ಮತ್ತು ನೋಟ್‌ಬುಕ್‌ಗಳ ವಿತರಣೆ ನಡೆದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ನಿಲ್ ಲೋಬೊ, ವಿದ್ಯಾರ್ಥಿಗಳು ಬ್ಯಾಂಕಿನ ಬೆಂಬಲವನ್ನು ನೆನಪಿಸಿಕೊಳ್ಳಬೇಕೆಂದು ಕರೆ ನೀಡಿದರು. ವಿದ್ಯಾರ್ಥಿಗಳು ಬೆಳೆದು ಸಾಮಾಜಿಕ ಸ್ಥಾನಮಾನ ಸಿಕ್ಕಾಗ ಸಾಮಾಜಿಕವಾಗಿ ಹಿಂದುಳಿದವರ ಬಗ್ಗೆ ಸಹಾನುಭೂತಿ ತೋರಬೇಕೆಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಿರ್ದೇಶಕರಾದ ಡಾ| ಜೆರಾಲ್ಡ್ ಪಿಂಟೊ, ಎಲ್‌ರೊಯ್ ಕಿರಣ್ ಕ್ರಾಸ್ಟೊ, ಶ್ರೀ ಸುಶಾಂತ್ ಸಲ್ಡಾನಾ, ಶರ್ಮಿಳಾ ಮಿನೇಜಸ್, ಐರಿನ್ ರೆಬೆಲ್ಲೊ, ರೋಶನ್ ಡಿಸೋಜಾ, ಹೆರಾಲ್ಡ್ ಜೆ. ಮಾಂತೆರೊ, ಜೆ.ಪಿ. ರೋಡ್ರಿಗಸ್, ಅಂಡ್ರೂಂಯ ಡಿಸೋಜ ಮತ್ತು ಕುಂದಾಪುರ, ಬ್ರಹ್ಮಾವರ, ಅಶೋಕನಗರ, ಕಂಕನಾಡಿ, ಮಾರ್ಗನ್ಸ್ಗೇಟ್, ಪುತ್ತೂರು ಮತ್ತು ಉಳ್ಳಾಲ ಶಾಖೆಗಳ ಶಾಖಾ ವ್ಯವಸ್ಥಾಪಕ ಕೂಡ ಭಾಗವಹಿಸಿದ್ದರು.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!