ಈಗಿನ ಯಂಗ್ ಜನರೇಷನ್‌ಗೆ ಪಾಪ್ಯುಲಾರಿಟಿಯ ಹುಚ್ಚು, ವೈರಲ್ ಆಗುವ ಹುಚ್ಚು ಮಿತಿಮೀರಿದೆ. ಇದಕ್ಕಾಗಿ ಬಟ್ಟೆ ಬಿಚ್ಚಲೂ ರೆಡಿ ಇದ್ದವರೂ ಇದ್ದಾರೆ. ಆದರೆ ಇಲ್ಲೊಬ್ಬಳು ಮೂರುಕಾಸಿನವಳು ಪ್ರಚಾರದ ಹುಚ್ಚಿಗಾಗಿ ತನ್ನ ತುಟಿಯನ್ನೇ ದಪ್ಪ ಮಾಡಲು ಆಪರೇಷನ್ ಮಾಡಿದ್ದು ಇದಕ್ಕಾಗಿ ಬರೋಬ್ಬರಿ 1.3 ಕೋಟಿಗೂ ಜಾಸ್ತಿ ಖರ್ಚು ಮಾಡಿದ್ದಾಳೆ. ಇದೀಗ ಆಕೆ ಮುಖ ಹಂದಿಯಂತೆ ಬದಲಾಗಿ ವಿಕೃತವಾಗಿ ಕಾಣುತ್ತಿದ್ದು, ಆದರೆ ಆಕೆ ಮಾತ್ರ ತಾನು ಸುಂದರಿಯಾಗಿ ಕಾಣುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಕಿಪಿ ಕನಸು ಕಾಣುತ್ತಿದ್ದಾಳೆ.
ಅಂದಹಾಗೆ ಇವಳ ಹೆಸರು ವಿಯೆನ್ನಾ. ಸ್ಪೇನ್‌ನ ಮಜೋರ್ಕಾ ನಿವಾಸಿಯಾಗಿರುವ ಈಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಪ್ರಭಾವಿ ಹುಡುಗಿ.
ಈಕೆ ಲಿಪ್ ಫಿಲ್ಲರ್ ಮತ್ತು ಪ್ಲಾಸ್ಟಿಕ್ ಸರ್ಜರಿ ಮೂಲಕ ತುಟಿಯನ್ನು ದಪ್ಪ ಮಾಡಿ ಇದೀಗ ವಿಶ್ವದ ಅತಿದೊಡ್ಡ ತುಟಿಗಳನ್ನು ಹೊಂದಿರುವ ಹುಡುಗಿ ಎಂಬ ದಾಖಲೆಗೆ ಪಾತ್ರಳಾಗಿದ್ದಾಳೆ. ಈಕೆ ಅವತಾರ ನೋಡಿ ಜನರು ಆನ್‌ಲೈನ್‌ನಲ್ಲಿ ಚೀ ತೂ ಅಂತ ಉಗುಳುತ್ತಿದ್ದರೂ ಯಾವುದಕ್ಕೂ ಲೆಕ್ಕಿಸದೆ ಇಂಟರ್ನೆಟಲ್ಲಿ ಹಾವಳಿ ಎಬ್ಬಿಸಿದ್ದಾಳೆ.
ಸ್ಪೇನ್ ಜನರು ತನ್ನ ಸೋಷಿಯಲ್ ಮೀಡಿಯಾ ಓಪನ್ ಮಾಡಿ ರೀಲ್ಸ್ ನೋಡಿದ್ರೆ ಸಾಕು. ಆಗ ದಪ್ಪ ತುಟಿಯ ವಿಯೆನ್ನಳಾ ರೀಲ್ಸ್ ದರ್ಶನವಾಗುತ್ತದಂತೆ. ನಮ್ಮಲ್ಲಿಯೂ ನೀವು ರೀಲ್ಸ್ ಓಪನ್ ಮಾಡಿದಾಗ ಕೆಲವರದ್ದು ಬೇಡ ಅಂದ್ರೂ ಬರ್ತದಲ್ಲ ಅಲ್ಲೂ ಹಾಗೆ.
ವಿಯೆನ್ನಾ ರೂಪಾಂತರವು 18 ನೇ ವಯಸ್ಸಿನಲ್ಲಿ ಪ್ರಾರಂಭವಾಯಿತು, ಈಗವಳು ತನ್ನ ತುಟಿಯ ದಪ್ಪ ಮಾಡಲು ಕಾಸ್ಮೆಟಿಕ್‌ಗೆ $160,000 (ಸುಮಾರು ರೂ. 1.3 ಕೋಟಿ) ಗಿಂತ ಹೆಚ್ಚು ಖರ್ಚು ಮಾಡಿದ್ದಾಳೆ, ಅದರಲ್ಲಿ £37,000 (ಸುಮಾರು ರೂ. 39 ಲಕ್ಷ) ಅವಳ ತುಟಿಗಳಿಗೆ ಖರ್ಚಾಗಿದೆ. ಅಷ್ಟು ಮಾತ್ರವಲ್ಲದೆ ಆಕೆಗೆ ತನ್ನ ಸ್ತನ ಹಿಗ್ಗುಸುವಿಕೆ ಮತ್ತು ಪೃಷ್ಠ ಎತ್ತರ ಮಾಡುವುದು, ಕೆನ್ನೆ, ಗಲ್ಲ, ಕಣ್ಣು ಮತ್ತು ಇತ್ಯಾದಿಗಳನ್ನು ದಪ್ಪ ಅಗಲ ಮಾಡಿದ್ದಾಳಂತೆ. ಈಗ ಅವರು ಶೂರ್ಪನಖಿಯಂತೆ ಕಾಣುತ್ತಿದ್ದಳೂ ಆಕೆಯ ಗೀಳು ಕಡಿಮೆಯಾಗಿಲ್ಲ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝