ಮೂರು ದಿನದಲ್ಲೇ ಪ್ರೀತಿ, ಪ್ರೇಮ, ಪ್ರಣಯ! ಇಬ್ಬರು ಮಕ್ಕಳ ತಾಯಿಯ ಕೊಂದು ಜೈಲು ಸೇರಿದ ಸಿವಿಲ್ ಇಂಜಿನಿಯರ್!!

ಹಾಸನ: ಫೇಸ್ಬುಕ್ ನಲ್ಲಿ ಪರಿಚಯವಾದ ವಿವಾಹಿತ ಮಹಿಳೆಯೊಂದಿಗೆ ಸಲುಗೆ ಬೆಳಸಿ ಪ್ರೀತಿಯ ನಾಟಕವಾಡಿ, ಜಾಲಿರೈಡ್‌ಗೆ ಕರೆದೊಯ್ದು ಬಳಿಕ ಆಕೆಯನ್ನು ಕೊಲೆ ಮಾಡಿದ್ದ ಸಿವಿಲ್ ಎಂಜಿನಿಯರಿಂಗ್‌ ಪದವೀಧರನನ್ನು ಕಿಕ್ಕೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕರೋಟಿ ಗ್ರಾಮದ ಪುನೀತ್‌(24) ಬಂಧಿತ ಆರೋಪಿಯಾಗಿದ್ದಾನೆ. ಕೇವಲ ಮೂರು ದಿನದಲ್ಲಿ ವಿವಾಹಿತ ಮಹಿಳೆಯೊಂದಿಗೆ ಪ್ರೀತಿ, ಪ್ರೇಮ, ಪ್ರಣಯ ಎಲ್ಲವನ್ನು ಮಾಡಿದ್ದ ಪುನೀತ್ ಅಂತಿಮವಾಗಿ ಆಕೆಯನ್ನು ಕೊಲೆ ಮಾಡಿ‌ ಜೈಲು ಪಾಲಾಗಿದ್ದಾನೆ. ಫೇಸ್ಬುಕ್ ‌‍ನಲ್ಲಿ ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ (35) ಎಂಬಾಕೆಯನ್ನು ಪರಿಚಯ ಮಾಡಿಕೊಂಡಿದ್ದ ಪುನೀತ್‌ ಆಕೆಯೊಂದಿಗೆ ಸ್ನೇಹ ಬೆಳೆಸಿದ್ದ.
ಇಬ್ಬರ ನಡುವೆ ಕೆಲವೇ ದಿನದಲ್ಲಿ ಪ್ರೀತಿ ಬೆಳೆದು ಅದು ಪ್ರಣಯಕ್ಕೆ ತಿರುಗಿದೆ. ವಿಚಿತ್ರವೆಂದರೆ ಪ್ರೀತಿಗೆ ಮದುವೆಯಾಗಿ ಗಂಡ ಇಬ್ಬರು ಮಕ್ಕಳಿದ್ದರೂ ಸಹ ಪುನೀತ್‌ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು.
ಕಳೆದ ಭಾನುವಾರ ಮೈಸೂರಿಗೆ ಒಟ್ಟಿಗೆ ಕಾರಿನಲ್ಲಿ ತೆರಳಿದ್ದರು. ಮೈಸೂರು, ಮಂಡ್ಯ ಪ್ರವಾಸಿ ಸ್ಥಳಗಳಲ್ಲಿ ಸುತ್ತಾಡಿ ರೂಮ್ ಮಾಡಿ ಒಂದಾಗಿದ್ದ ಜೋಡಿ ನಂತರ ಮತ್ತೆ ಕೆ.ಆರ್‌ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶಕ್ಕೆ ಬಂದಿದ್ದಾರೆ. ಅಲ್ಲಿ ಸೆಕ್ಸ್ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಆ ವೇಳೆ ಪುನೀತ್‌ ಆಕೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ನಂತರ ಆಕೆಯ ಮೇಲಿದ್ದ ಚಿನ್ನಾಭರಣ ದೋಚಿದ್ದಾನೆ. ನಂತರ ಯಾರಿಗೂ ತಿಳಿಯದಂತೆ ಶವವನ್ನು ತನ್ನ ಊರಿನಲ್ಲಿದ್ದ ಜಮೀನಿಗೆ ಸಾಗಿಸಿ ಸೌದೆಗಳಿಂದ ಮುಚ್ಚಿಟ್ಟು ಪರಾರಿಯಾಗಿದ್ದ.
ಈ ನಡುವೆ ಮನೆಯವರು ಪ್ರೀತಿ ನಾಪತ್ತೆಯಾದ ಬಗ್ಗೆ ಹುಡುಕುತ್ತಿದ್ದರು. ನಿನ್ನೆ ಪ್ರೀತಿ ಮೊಬೈಲ್‌ ಸ್ವೀಕರಿಸದಿದ್ದಾಗ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ನಂತರ ತನಿಖೆ ಕೈಗೊಂಡು ಮೊಬೈಲ್ ಗೆ ಬಂದಿದ್ದ ಕರೆಗಳನ್ನು ಪರಿಶೀಲಿಸಿದಾಗ
ಆರೋಪಿ ಪುನಿತ್‌ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಪುನೀತ್ ಕೊಲೆ ಮಾಡಿದ ಬಾಳಿಕ ಪ್ರೀತಿಯ ಮೊಬೈಲ್ ಕೊಂಡೊಯ್ದಿದ್ದ. ಇದರಿಂದಾಗಿ ಸಿಕ್ಕಿಬಿದ್ದಿದ್ದಾನೆ. ಶವ ಮುಚ್ಚಿಟ್ಟಿದ್ದ ಸ್ಥಳವನ್ನು ಪತ್ತೆ ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಕೇವಲ 24 ತಾಸಿನಲ್ಲಿ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

error: Content is protected !!