ಬಿಜೈ: ಅಕ್ರಮ ಚಟುವಟಿಕೆ ಹಿನ್ನೆಲೆ ಸಿಕ್ಸ್ತ್ ಸೆನ್ಸ್ ಬ್ಯೂಟಿ ಸಲೂನ್‌ಗೆ ಪೊಲೀಸ್‌ ದಾಳಿ

ಮಂಗಳೂರು: ಮಂಗಳೂರಿನ ಬಿಜೈನಲ್ಲಿರುವ ಪಿಂಟೋ ಚೇಂಬರ್ಸ್‌ನ ಎರಡನೇ ಮಹಡಿಯಲ್ಲಿರುವ ಉಡುಪಿಯ ಬ್ರಹ್ಮಗಿರಿ ನಿವಾಸಿ ಸುದರ್ಶನ್ ಎಂಬವರ ಒಡೆತನದ ಸಿಕ್ಸ್ತ್ ಸೆನ್ಸ್ ಬ್ಯೂಟಿ ಸಲೂನ್‌ಗೆ ಮಂಗಳೂರು ನಗರ ಪೊಲೀಸರು ದಾಳಿ ನಡೆಸಿದ್ದಾರೆ.

ಇಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ದೊರಕಿದ ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ಪೊಲೀಸರು ಈ ದಾಳಿ ನಡೆಸಿದ್ದಾರೆ ಎಂದು ಪೊಲೀಸರ ಪ್ರಕಟಣೆ ತಿಳಿಸಿದೆ.

ಈ ಕುರಿತಂತೆ ಉರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 55/2025 ರ ಅಡಿಯಲ್ಲಿ ಅನೈತಿಕ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 3(1), 4, 5 ಮತ್ತು 6 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣವು ಪ್ರಸ್ತುತ

ಇದಲ್ಲದೆ, ಈ ಬ್ಯೂಟಿ ಸಲೂನ್‌ಗೆ ನೀಡಲಾದ ವ್ಯಾಪಾರ ಪರವಾನಗಿಯನ್ನು ರದ್ದುಗೊಳಿಸಲು ಶಿಫಾರಸು ಮಾಡುವಂತೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ವರದಿ ಸಲ್ಲಿಸಲಾಗಿತ್ತು. ವರದಿಯ ಮೇರೆಗೆ, ಮನಪಾ ಕಮಿಷನರ್‌ ಸಿಕ್ಸ್ತ್ ಸೆನ್ಸ್ ಬ್ಯೂಟಿ ಸಲೂನ್‌ನ ವ್ಯಾಪಾರ ಪರವಾನಗಿಯನ್ನು ರದ್ದುಗೊಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ನಗರದಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸರ ಪ್ರಕಟಣೆ ತಿಳಿಸಿದೆ.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!