ಬಂಟ್ವಾಳ :ಯೂತ್ ಫಾರ್ ಸೇವಾ ಎಂಬ ಸ್ವಯಂ ಸೇವಾ ಸಂಸ್ಥೆ ಯ ವತಿಯಿಂದ ಬೆಂಗಳೂರಿನ ಹೆಸರಾಂತ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಂಪನಿಯವರ ಸಹಯೋಗ ದೊಂದಿಗೆ ಬ್ಯಾಗ್ ಮತ್ತು ಲೇಖನ ಸಾಮಗ್ರಿಗಳನ್ನು ಪಿಎಂಶ್ರೀ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಎಕ್ಸೆಸ್ ಪ್ರಾಥಮಿಕ ಶಾಲೆ, ಕೊಡಂಗೆ ಬಿ. ಸಿ. ರೋಡ್ ಇಲ್ಲಿನ ಎಲ್ ಕೆ ಜಿ ಯಿಂದ 7ನೇ ತರಗತಿವರೆಗಿನ 242 ಮಕ್ಕಳಿಗೆ ವಿತರಿಸಲಾಯಿತು.
ಟೆಕ್ಸಸ್ ಕಂಪನಿಯ ಸಂಗಮೇಶ್ ಸೇರಿದಂತೆ 13 ಜನ ಇಂಜಿನಿಯರ್ ಗಳು ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ ಹೈದರ್, ಸದಸ್ಯರಾದ ಟಿ.ಹನಿಫ್, ಬಿ. ಎಂ.ಇಸ್ಮಾಯಿಲ್, ಅಧ್ಯಾಪಕಿಯರಾದ ಜ್ಯೋತಿಕಲಾ, ತೇಜಸ್ವಿ ಶೆಟ್ಟಿ, ಭವ್ಯ ಜ್ಯೋತಿ, ಸುರಯ್ಯ, ಶೀದಾ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಗುಣ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿ, ಶ್ರೀಮತಿ ಲವೀನ ಪಿಂಟೋ ರವರು ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀಮತಿ ವಾಣಿಯವರು ಧನ್ಯವಾದವಿತ್ತರು.ಆಗಮಿಸಿದ ಎಲ್ಲಾ ಇಂಜಿನಿಯರ್ ರವರನ್ನು ಗೌರವಿಸಿ ಬಿಳ್ಕೊಡಲಾಯಿತು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj