ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಮತ್ತು ಇಸ್ರೇಲ್ ಸಂಪೂರ್ಣ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದು, 12 ದಿನಗಳ ಯುದ್ಧ ಅಂತ್ಯಗೊಂಡಿದೆ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಇರಾನ್‌ನಿಂದ ಕ್ಷಿಪಣಿ ದಾಳಿ ಮುಂದುವರಿದಿದ್ದು, ಇಸ್ರೇಲ್ ಕೂಡಾ ಅದೇ ರೀತಿ ಪ್ರತಿಕ್ರಿಯಿಸುತ್ತಿಉದೆ.
)
ಗಡುವು ಮುಗಿದ ಒಂದು ಗಂಟೆಯ ನಂತರವೂ, ಟೆಹ್ರಾನ್ ಯಹೂದಿ ರಾಷ್ಟ್ರದ ಮೇಲೆ ಕ್ಷಿಪಣಿಗಳನ್ನು ಹಾರಿಸುತ್ತಿದೆ ಎಂದು ಇಸ್ರೇಲ್ ಮಿಲಿಟರಿ ಘೋಷಿಸಿದೆ. ಇದರಿಂದಾಗಿ ಇರಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮದ ಪರಿಸ್ಥಿತಿ ಅಸ್ಪಷ್ಟವಾಗಿ ಉಳಿದಿದೆ. ಕ್ಷಿಪಣಿ ಹೊಡೆತಕ್ಕೆ ಇಸ್ರೇಲ್‌ನ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.
ಅಮೆರಿಕಾ ಇರಾನಿನನ ಮೂರು ಪರಮಾಣು ನೆಲೆಗಳನ್ನು ನಾಶಪಡಿಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಕತಾರ್‌ನಲ್ಲಿರುವ ಅಮೆರಿಕದ ಅಲ್ ಉದೈದ್ ನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರುತ್ ಸೋಷಿಯಲ್‌ನಲ್ಲಿ ಇರಾನ್ ಮತ್ತು ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಿದರು.
ವೈಟ್ ಹೌಸ್ ಅಧಿಕಾರಿಯೊಬ್ಬರ ಪ್ರಕಾರ, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಸೇರಿದಂತೆ ಟ್ರಂಪ್ ತಂಡವು ಟೆಹ್ರಾನ್ ಅಧಿಕಾರಿಗಳು ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಿ ಕದನ ವಿರಾಮವನ್ನು ಮಧ್ಯಸ್ಥಿಕೆ ವಹಿಸಿದರು. ಕದನ ವಿರಾಮದ ವಿವರಗಳನ್ನು ಒದಗಿಸಿದ ಅಧಿಕಾರಿ, ಇರಾನ್ ಹೊಸ ದಾಳಿಗಳನ್ನು ಪ್ರಾರಂಭಿಸದಿದ್ದರೆ ಇಸ್ರೇಲ್ ಕದನವಿರಾಮಕ್ಕೆ ಒಪ್ಪಿಗೆ ನೀಡುತ್ತದೆ ಹೇಳಿದರು. ಆಗ ಇರಾನ್ ಕೂಡಾ ಇದಕ್ಕೆ ಒಪ್ಪಿಗೆ ಸೂಚಿಸಿತು.

ಇದಾದ ನಾಲ್ಕು ಗಂಟೆಯಲ್ಲಿಯೇ ಉಲ್ಟಾ ಹೊಡೆದ ಡೊನಾಲ್ಡ್ ಟ್ರಂಪ್, ಇಸ್ರೇಲ್ ಹಾಗೂ ಇರಾನ್ ಏಕಕಾಲದಲ್ಲಿ ನನ್ನಡೆಗೆ ಬಂದು ನಮಗೆ ಶಾಂತಿ ಬೇಕೆಂದು ಹೇಳಿದರು. ಈ ಸಮಯ ಈಗ ಬರುತ್ತದೆ ಎಂದು ನನಗೆ ತಿಳಿದಿತ್ತು ಎಂದು ಹೇಳಿದ್ದಾರೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮದ ಬಗ್ಗೆ ಟ್ರಂಪ್ ಘೋಷಣೆಯ ಸುದ್ದಿ ಹೊರಬೀಳುತ್ತಿದ್ದಂತೆ, ಟೆಹ್ರಾನ್ ಅಂತಹ ಯಾವುದೇ ಒಪ್ಪಂದಕ್ಕೆ ಒಪ್ಪಿಕೊಂಡಿಲ್ಲ ಎಂದು ಹೇಳಿದೆ, ಇದು ಯುಎಸ್ ಅಧ್ಯಕ್ಷರ ಘೋಷಣೆಗೆ ವಿರುದ್ಧವಾಗಿದೆ.
ನವದಹೆಲಿ: ಇಸ್ರೇಲ್ ಜೊತೆ ಸದ್ಯಕ್ಕೆ ಯಾವುದೇ ಕದನ ವಿರಾಮ ಒಪ್ಪಂದವಿಲ್ಲ, ಆದರೆ ಅದು ತನ್ನ ದಾಳಿಯನ್ನು ನಿಲ್ಲಿಸಿದರೆ ಟೆಹ್ರಾನ್ ಕೂಡ ದಾಳಿಯನ್ನು ನಿಲ್ಲಿಸುತ್ತದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ X ನಲ್ಲಿ ಬರೆದಿದ್ದಾರೆ. ಇಸ್ರೇಲ್ ತನ್ನ ಕಾನೂಬಾಹಿರ ಆಕ್ರಮವನ್ನು ನಿಲ್ಲಿಸಿದರೆ ನಮ್ಮ ಪ್ರತಿಕ್ರಿಯೆಯೂ ನಿಲ್ಲುತ್ತದೆ. “ನಮ್ಮ ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆಯ ಕುರಿತು ಅಂತಿಮ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಇಸ್ರೇಲ್ ಇಂದು ಬೆಳಿಗ್ಗೆ ನಾಲ್ಕು ಗಂಟೆಯವರೆಗೂ ಇರಾನ್ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸಿತು. ಆ ಬಳಿಕ ಯಾವುದೇ ಕಾರ್ಯಾಚರಣೆ ನಡೆದಿಲ್ಲ. ಹಾಗಾಗಿ ಯುದ್ಧಗಳು ಕೊನೆಗೊಂಡಿದೆ ಎಂದು ಅಬ್ಬಾಸ್ ಅರಘ್ಚಿ ಸುಳಿವು ನೀಡಿದರು. ಎಲ್ಲಾ ಇರಾನಿಯನ್ನರು ನಮ್ಮ ಪ್ರೀತಿಯ ದೇಶವನ್ನು ತಮ್ಮ ಕೊನೆಯ ರಕ್ತದ ಹನಿಯವರೆಗೆ ರಕ್ಷಿಸಲು ಸಿದ್ಧರಾಗಿರುವಾಗ ಶತ್ರುಗಳಿಗೆ ನಾವ್ಯಾಕೆ ಭಯಪಡಬೇಕು? ಕೊನೆಯ ಕ್ಷಣದವರೆಗೂ ಶತ್ರುಗಳ ಯಾವುದೇ ದಾಳಿಗೆ ಪ್ರತಿಕ್ರಿಯಿಸಿದ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಅಬ್ಬಾಸ್ ಅರಘ್ಚಿ ತಿಳಿಸಿದರು.
ಇಸ್ರೇಲ್‌ನಲ್ಲಿ ಮೂರು ಕ್ಷಿಪಣಿ ಬೀಳುವ ಎಚ್ಚರಿಕೆಯನ್ನು ನೀಡಲಾಗಿತ್ತು. ಆದರೆ ಮಂಗಳವಾರ ಬೆಳ್ಳಂಬೆಳ್ಳಗ್ಗೆ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಕೊಂಡಿದೆ ಎಂಬ ಸುದ್ದಿ ಕೇಳಿ ಇಸ್ರೇಲಿಗರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಂತೆ ಜೆರುಸಲೆಂ ಹಾಗೂ ದೇಶದ ಇತರ ಭಾಗಗಳಲ್ಲಿ ಕ್ಷಿಪಣಿ ದಾಳಿಯ ಶಬ್ದಗಳನ್ನು ಕೇಳಿದ್ದಾರೆ ಎಂದು ವರದಿಯಾಗಿದೆ.
ಕದನ ವಿರಾಮದ ಸುದ್ದಿಯ ಹೊರತಾಗಿಯೂ ಟೆಹ್ರಾನ್ ಯಹೂದಿ ರಾಷ್ಟ್ರ ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಉಡಾಯಿಸುತ್ತಿದೆ ಎಂದು ಇಸ್ರೇಲ್ ಮಿಲಿಟರಿ ವರದಿ ಮಾಡಿದೆ. ಇಸ್ರೇಲ್‌ನ ರಕ್ಷಣಾ ಪಡೆಗಳು (IDF) “ಸ್ವಲ್ಪ ಸಮಯದ ಹಿಂದೆ, ಇರಾನ್‌ನಿಂದ ಇಸ್ರೇಲ್ ರಾಜ್ಯದ ಕಡೆಗೆ ಉಡಾಯಿಸಲಾದ ಕ್ಷಿಪಣಿಗಳನ್ನು ಗುರುತಿಸಿದ ನಂತರ ಇಸ್ರೇಲ್‌ನಾದ್ಯಂತ ಹಲವಾರು ಪ್ರದೇಶಗಳಲ್ಲಿ ಸೈರನ್‌ಗಳು ಮೊಳಗಿದವು. IAF (ಇಸ್ರೇಲಿ ವಾಯುಪಡೆ) ಕೂಡ ಶತ್ರುಗಳ ದಾಳಿಯನ್ನು ಹಿಮ್ಮೆಟ್ಟಿಸಲು ಸಜ್ಜಾಗಿ ನಿಂತಿದೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝